Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಬ್ಲಾಕ್ ಕಾಂಗ್ರೆಸ್: ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 20ನೇ ಶತಮಾನದ ಆಧುನಿಕ ಭಾರತದ ಕುರಿತು ಮಹಾನ್ ಕನಸು ಹೊತ್ತಿದ್ದ ಮತ್ತು ಕಂಪ್ಯೂಟರ್ ಕ್ರಾಂತಿಯ ಮೂಲಕ ಅದಕ್ಕೆ ಅಡಿಪಾಯ ಹಾಕಿದ್ದ ಹಾಗೂ ಶ್ರೀಲಂಕಾದಲ್ಲಿರುವ ತಮಿಳಿಗರ ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಲು ಹೋಗಿದ್ದ ನಾಯಕನೊಬ್ಬ ಇಂದಿಗೆ 29ವರ್ಷಗಳ ಹಿಂದೆ  ಭೀಕರವಾಗಿ ಹತ್ಯೆಯಾಗಿಹೋಗಿದ್ದರು ಅದು ಆಧುನಿಕ ಭಾರತಕ್ಕಾದ ಮಹಾನ್ ನಷ್ಟ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಸಂಧರ್ಭದಲ್ಲಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ್ ಹೆಗ್ಡೆ , ಕೆಪಿಸಿಸಿ ಐ‌.ಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಯುವ ಮುಖಂಡರಾದ ದಿನೇಶ್ ಖಾರ್ವಿ, ನಾಗರಾಜ ಕೋಟೇಶ್ವರ, ರಾಜಾ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ವಂದಿಸಿದರು.

 

Exit mobile version