Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 80 ಕಡೆ ಸೀಲ್ ಡೌನ್, ಗಂಗೊಳ್ಳಿ, ಬೈಂದೂರಿನಲ್ಲಿ ಗರಿಷ್ಠ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜೂ.4: ಕೋವಿಡ್-19 ಪಾಸಿಟಿವ್ ಬರುವ ವ್ಯಕ್ತಿಯ ಮನೆಯ ಸುತ್ತಲಿನ 200 ಮೀ. ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದ್ದು, ಕುಂದಾಪುರ ಉಪವಿಭಾಗದಲ್ಲಿ ಇಲ್ಲಿಯ ತನಕ ಒಟ್ಟು 80 ಕಡೆಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಈ ಪೈಕಿ ಗಂಗೊಳ್ಳಿ ಹಾಗೂ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗರಿಷ್ಠ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಬೈಂದೂರು ಠಾಣೆ ವ್ಯಾಪ್ತಿಯಲ್ಲಿ 31, ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ 2, ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ 32, ಕುಂದಾಪುರ ಠಾಣೆ ವ್ಯಾಪ್ತಿಯಲ್ಲಿ 07, ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 07, ಅಮಾಸೆಬೈಲು ಠಾಣೆ ವ್ಯಾಪ್ತಿಯ 01 ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಸೀಲ್ ಡೌನ್ ಹಾಗೂ ಕಂಟೈನ್ಮೆಂಟ್ ಆಗಿರುವ ಪ್ರದೇಶಗಳಲ್ಲಿ ಕೇದೂರು, ತೆಕ್ಕಟ್ಟೆ, ಬೀಜಾಡಿ, ಬಸ್ರೂರು, ಕೋಣಿ, ಗುಲ್ವಾಡಿ, ಕರ್ಕುಂಜೆ, ಹಳ್ನಾಡು, ಕೋಡಿ,  ವಡೇರಹೋಬಳಿ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಹಕ್ಲಾಡಿ, ಮರವಂತೆ, ನಾವುಂದ, ಹಡವು ನಾಡ, ನೆಂಪು, ಕಂಬದಕೋಣೆ, ಗಂಗೊಳ್ಳಿ, ಗುಜ್ಜಾಡಿ, ಕೊಲ್ಲೂರು, ಜಡ್ಕಲ್, ಗೋಳಿಹೊಳೆ, ಯಡ್ತರೆ, ಬೈಂದೂರು, ಶಿರೂರು ಮೊದಲಾದ ಗ್ರಾಮದ ವಿವಿಧ ಪ್ರದೇಶಗಳು ಸೇರಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮುಂಬೈ ಹಾಗೂ ಹೊರರಾಜ್ಯ, ದೇಶಗಳಿಂದ ಬಂದು ಕ್ವಾರಂಟೈನಿನಲ್ಲಿ ಇದ್ದವರು ಮನೆಗೆ ತೆರಳಿದ ಬಳಿಕ ಕೋವಿಡ್ ವರದಿಗಳು ಬರುತ್ತಿದ್ದು, ಕಳೆದ ಮೂರು ದಿನಗಳಿಂದ ಹೆಚ್ಚು ವರದಿಗಳು ದೊರೆಯುತ್ತಿವೆ. ಹಾಗಾಗಿ ಪಾಸಿಟಿವ್ ಬರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ದುಲಾಗುತ್ತಿದ್ದು, ಕೋವಿಡ್-19 ಸಮುದಾಯಕ್ಕೆ ಹರಡದಂತೆ ತಡೆಯಲು ಪಾಸಿಟಿವ್ ಬರುವ ವ್ಯಕ್ತಿಗಳ ಮನೆಯ ಸುತ್ತಲಿನ 200 ಮೀ. ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಉಡುಪಿ ಜಿಲ್ಲೆ: ಗುರುವಾರ 92 ಕೊರೋನಾ ಪಾಸಿಟಿವ್ – https://kundapraa.com/?p=38278 .
► ಕೋವಿಡ್ ಪ್ರಕರಣ ನಿಭಾಯಿಸುವಲ್ಲಿ ಬೈಂದೂರು ತಾಲೂಕಿನಲ್ಲಿ ನಿರ್ಲಕ್ಷ್ಯ ಧೊರಣೆ: ಬ್ಲಾಕ್ ಕಾಂಗ್ರೆಸ್ ನಿಯೋಗ ಖಂಡನೆ – https://kundapraa.com/?p=38258 .

Exit mobile version