ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೂನ್ 22ರಂದು ಬಾರ್ಕೂರು ಚೌಳಿಕೆರೆಗೆ ಬಿದ್ದು ಕಾರು ಮುಳುಗಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರಗೊಂಡಿದ್ದ ಯುವತಿಗೆ ಆಸ್ಪತ್ರೆಗೆ ಕೊಂಡೊಯ್ಯುವ ಮೊದಲು ಬಾರ್ಕೂರಿನ 10ನೇ ತರಗತಿ ವಿದ್ಯಾರ್ಥಿನಿಯ ಪ್ರಥಮ ಚಿಕಿತ್ಸೆಯಿಂದಾಗಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ವಿದ್ಯಾರ್ಥಿನಿ ಹಾಗೂ ಕೆರೆಗಿಳಿದು ಅಪಘಾತವಾದವರ ರಕ್ಷಣೆಗೆ ನಿಂತ ಪ್ರದೀಪ್ ದೇವಾಡಿಗ, ಪ್ರವೀಣ ಪೂಜಾರಿ ಎಂಬ ಯುವಕರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಬಾರಕೂರು ಕಡೆಯಿಂದ ಸಾಬರಕಟ್ಟೆ ಹೋಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ತಡೆಗೋಡೆ ಇಲ್ಲದ ಚೌಳಿಕೆರೆಗೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಕಾರು ಮುಳುಗಿದ ತಕ್ಷಣ ಪ್ರದೀಪ್ ದೇವಾಡಿಗ, ಹಾಗೂ ಪ್ರವೀಣ್ ಪೂಜಾರಿ ಎಂಬ ಯುವಕರಿಬ್ಬರು ಜೀವದ ಹಂಗು ತೊರೆದು ಕೆರೆಗೆ ಇಳಿದು ಕಾರಿನ ಗ್ಲಾಸ್ ಒಡೆದು ಕಷ್ಟಪಟ್ಟು ಕಾರಿನೊಳಗಿದ್ದ ಶ್ವೇತ ಶೆಟ್ಟಿ ಹಾಗೂ ಸಂತೋಷ ಶೆಟ್ಟಿಯನ್ನು ಹೊರತೆಗೆಯಲು ಹರಸಾಹಸಪಟ್ಟರು. ಸಂತೋಷ ಶೆಟ್ಟಿ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು. ಶ್ವೇತಾ ಶೆಟ್ಟಿ ಅವರ ಪ್ರಜ್ಞೆ ಕಳೆದುಕೊಂಡಿದ್ದರು. ಯುವತಿ ಪ್ರಜ್ಞಾನೀನರಾಗಿರುವುದನ್ನು ತಿಳಿಯ ಬ್ರಹ್ಮಾವರ ಲಿಟ್ಲ್ ರಾಕ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿ ನಮನ, ತಕ್ಷಣ ಕಾರ್ಯಪ್ರವೃತ್ತಳಾಗಿ ನೀರಿನಿಂದ ಮೇಲೆ ಎಲೇತ್ತಿದ್ದ ಯುವತಿಗೆ, ಸ್ವಲ್ಪವು ವಿಚಲಿತಳಾಗದೆ ಪ್ರಥಮ ಚಿಕಿತ್ಸೆ ನೀಡಿ ಯುವತಿಯನ್ನು ಬದುಕಿಸುವಲ್ಲಿ ಶ್ರಮವಹಿಸಿದ್ದಳು.
Video
ಕೆರೆ ಬಿದ್ದ ಯುವತಿಯ ಉಸಿರಾಟಕ್ಕೆ ತೊಂದರೆಯಾಗಿದ್ದ ನೀರನ್ನು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಮೂಲಕ ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರೂ ನಮನಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ್ದಲ್ಲದಿದ್ದರೆ ಜೀವಕ್ಕೇ ಅಪಾಯ ಇತ್ತು ಎಂದಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿದ್ಯಾರ್ಥಿನಿಯ ಧೈರ್ಯ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ. ನಮಯ ಉಪನ್ಯಾಸಕಿ ಸವಿತಾ ಎರ್ಮಾಳ್ ಹಾಗೂ ಕುಮಾರ ದಂಪತಿಗಳ ಪುತ್ರಿ.
ಇದನ್ನೂ ಓದಿ:
► ಕೆರೆಗೆ ಬಿದ್ದ ಕಾರು: ವಕ್ವಾಡಿಯ ಉದ್ಯಮಿ ಮೃತ, ಮಹಿಳೆ ಗಂಭೀರ – https://kundapraa.com/?p=38842 .