Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಯಂತ್ರಶ್ರೀ ಪ್ರಾತ್ಯಕ್ಷಿಕೆ, ನಾಟಿಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಬೈಂದೂರು ಬೈಂದೂರು ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ವೆಂಕ್ಟ ಪೂಜಾರಿ ಸಸಿಹಿತ್ಲು ಇವರ ಮನೆಯಲ್ಲಿ ಗುರುವಾರ ಯಂತ್ರಶ್ರೀ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವೆಂಕ್ಟ ಪೂಜಾರಿ ಸಸಿಹಿತ್ಲು, ಬೈಂದೂರು ಕೇಂದ್ರ ಸಮಿತಿ ಅಧ್ಯಕ್ಷರಾದ ರಘುರಾಮ ಕೆ ಪೂಜಾರಿ. ಕೊಲ್ಲೂರು ವಲಯದ ಅಧ್ಯಕ್ಷರಾದ ಮಂಜು ಪೂಜಾರಿ ಸಸಿಹಿತ್ಲು, ಯೋಜನಾಧಿಕಾರಿಗಳಾದ ಶಶಿರೇಖಾ ಪಿ., ಕೃಷಿ ಅಧಿಕಾರಿಗಳಾದ ಮಂಜುನಾಥ್ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಹಾಗೂ ಬೈಂದೂರು ವಲಯ ಮಾಜಿ ಅಧ್ಯಕ್ಷರಾದ ಕೃಷ್ಣ ಗಾಣಿಗ ಮೊದಲಾದವರು ಇದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು ನೇತೃತ್ವದಲ್ಲಿ ಬೈಂದೂರು ತಾಲೂಕಿನಲ್ಲಿ ೮೨೫ ಕುಟುಂಬದ ೯೨೦ ಎಕರೆ ಜಮೀನಿನಲ್ಲಿ ಯಂತ್ರಶ್ರೀ ನಾಟಿ ಪದ್ದತಿಯ ಗುರಿಯನ್ನು ಹೊಂದಿದೆ.

 

Exit mobile version