ಕುಂದಾಪ್ರ ಡಾಟ್ ಕಾಂ ಮಾಹಿತಿ.
ಉಡುಪಿ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಲಭ್ಯವಿರುವ ಸಹಾಯಧನದ ವಿವರ ಈ ಕೆಳಗಿನಂತಿದೆ.
ಸಣ್ಣ ಸಸ್ಯಾಗಾರಕ್ಕೆ ಸಹಾಯಧನ: 1.00 ಹೆ. ವಿಸ್ತೀರ್ಣದಲ್ಲಿ ಬ್ಯಾಂಕ್’ನಿಂದ ಅವಧಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ಸಸ್ಯಾಗಾರ/ನರ್ಸರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಗರಿಷ್ಟ ರೂ. 7.50 ಲಕ್ಷ ಸಹಾಯಧನ ವಿತರಿಸಲಾಗುವುದು.
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ: ಯೋಜನೆಯ ಮಾರ್ಗಸೂಚಿಯಂತೆ ನಿಗದಿತ ಬೆಳೆಗಳನ್ನು ನೂತನ ತಾಂತ್ರಿಕತೆಯೊಂದಿಗೆ ಹೊಸದಾಗಿ ಬೆಳೆಯುವ ರೈತರಿಗೆ ಸಹಾಯಧನವನ್ನು ವಿತರಿಸಲಾಗುವುದು. ಪ್ರತಿ ಫಲಾನುಭವಿ ಕನಿಷ್ಟ 0.20 ಹೆ. ಹಾಗೂ ಗರಿಷ್ಟ 4.00 ಹೆ. ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಹಾಯಧನವು ಒಟ್ಟು ವೆಚ್ಚದ ಶೇ. 40 ರಂತೆ ಇದ್ದು, 2020-21 ನೇ ಸಾಲಗೆ ಸಹಾಯಧನ ಪಡೆಯಬಹುದಾಗ ಬೆಳೆಗಳು ಹಾಗೂ ಸಹಾಯಧನದ ವಿವರ ಈ ಕೆಳಗಿನಂತಿದೆ.
- ಬಾಳೆ (ಕಂದುಗಳು)ವೆಚ್ಚ 65,000.00 ಸಹಾಯಧನ 26,000.00
- ಬಾಳೆ (ಅಂಗಾಂಶ ಕೃಷಿ) ವೆಚ್ಚ 1,02,000. 00 ಸಹಾಯಧನ 40,800.00
- ಅನಾನಸ್ಸು(ಕಂದುಗಳು) ವೆಚ್ಚ 87,500.00 ಸಹಾಯಧನ 35,000.00
- ಹೈಬ್ರಿಡ್ ತರಕಾರಿಗಳು ವೆಚ್ಚ 50,000.00, ಸಹಾಯಧನ 20,000.00
- ಬಿಡಿ ಹೂಗಳು ವೆಚ್ಚ 40,000.00 ಸಹಾಯಧನ 16,000.00
- ಕಾಳುಮೆಣಸು ವೆಚ್ಚ 50,000.00 ಸಹಾಯಧನ 20,000.00
- ಗೇರು/ಕೊಕ್ಕೊ ವೆಚ್ಚ 50,000.00 ಸಹಾಯಧನ 20,000.00
ಅಣಬೆ ಉತ್ಪಾದನಾ ಘಟಕಕ್ಕೆ ಸಹಾಯಧನ: ಬ್ಯಾಂಕ್ ನಿಂದ ಅವದಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ಅಣಬೆ ಉತ್ಪಾದನಾ ಘಟಕಕ್ಕೆ ಒಟ್ಟು ವೆಚ್ಚದ ಶೇ. 40 ರಂತೆ ಗರಿಷ್ಟ ರೂ. 8.00 ಲಕ್ಷ ಸಹಾಯಧನ ವಿತರಿಸಲಾಗುವುದು.
ಕಾಳು ಮೆಣಸು ಪುನಃಶ್ಚೆತನಕ್ಕೆ ಸಹಾಯಧನ: ಹಳೆಯ ಅನುತ್ಪಾದಕ ಕಾಳುಮೆಣಸು ತೋಟಗಳನ್ನು ಪುನಃಶ್ಚೆತನ ಕೈಗೊಳ್ಳುವ ರೈತರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ. 10,000.00 ಸಹಾಯಧನ ವಿತರಿಸಲಾಗುವುದು. ಪ್ರತಿ ಫಲಾನುಭವಿಗೆ ಗರಿಷ್ಟ 2.00 ಹೆ. ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ
ಕೃಷಿ ಹೊಂಡಕ್ಕೆ ಸಹಾಯಧನ: 20 ಮೀ. ಉದ್ದ, 20 ಮೀ. ಅಗಲ ಹಾಗೂ 3 ಮೀ. ಆಳದ ಕೃಷಿ ಹೊಂಡವನ್ನು Inlet, Outlet ಹಾಗೂ Plastic Line ನೊಂದಿಗೆ ನಿರ್ಮಾಣ ಮಾಡುವ ರೈತರಿಗೆ ಒಟ್ಟು ವೆಚ್ಚದ ಶೇ.50ರಂತೆ ಗರಿಷ್ಟ ರೂ. 75,000.00 ಸಹಾಯಧನ ವಿತರಿಸಲಾಗುವುದು. ಸದರಿ ಕಾರ್ಯಕ್ರಮಕ್ಕೆ ಸಹಾಯಧನ ಪಡೆಯಲು ರೈತರು 1.00 ಹೆ. ಜಮೀನು ಹೊಂದಿರಬೇಕು.
ಪ್ಲಾಸ್ಟಿಕ್ ಹೊದಿಕೆಗೆ ಸಹಾಯಧನ: ಪ್ಲಾಸ್ಟಿಕ್ ಹೊದಿಕೆಯನ್ನು ಉಪಯೋಗಿಸಿ ತರಕಾರಿಗಳನ್ನು ಬೆಳೆಯುವ ರೈತರಿಗೆ ಒಟ್ಟು ವೆಚ್ಚದ ಶೇ. 40 ರಂತೆ ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ. 16,000.00 ಸಹಾಯಧನ ವಿತರಿಸಲಾಗುವುದು. ಪ್ರತಿ ಫಲಾನುಭವಿಗೆ ಗರಿಷ್ಟ 2.00 ಹೆ. ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ
ಸಮಗ್ರ ಪೀಡೆ/ಪೋಷಕಾಂಶ ನಿರ್ವಹಣೆಗೆ ಸಹಾಯಧನ: ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವ ಸಸ್ಯ ಸಂರಕ್ಷಣಾ ಔಷದಿ, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳ ಖರೀದಿಗೆ ಒಟ್ಟು ವೆಚ್ಚದ ಶೇ. 30 ರಂತೆ ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ. 1,200.00 ಸಹಾಯಧನವನ್ನು ಗರಿಷ್ಟ 4.00 ಹೆಕ್ಟೇರ್ ವಿಸ್ತೀರ್ಣಕ್ಕೆ ವಿತರಿಸಲಾಗುವುದು.
ಜೇನು ಸಾಕಾಣೆಗೆ ಸಹಾಯಧನ: ತೋಟಗಾರಿಕೆ/ಕೃಷಿ ಬೆಳೆಗಳಲ್ಲಿ ಪರಾಗಸ್ಪರ್ಷ ಹೆಚ್ಚಿಸಲು ಜೇನು ಕೃಷಿ ಮಾಡುವ ರೈತರಿಗೆ ಯೋಜನೆಯಡಿ ಸಹಾಯಧನ ವಿತರಿಸಲಾಗುವುದು. ಜೇನು ಪೆಟ್ಟಿಗೆ, ಕುಟುಂಬ ಹಾಗೂ ಜೇನು ಸಂಗ್ರಹಣಾ ಉಪಕರಣಕ್ಕೆ ಒಟ್ಟು ವೆಚ್ಚದ ಶೇ. 40 ರಂತೆ ಈ ಕೆಳಗಿನಂತೆ ಸಹಾಯಧನವನ್ನು ನೀಡಲಾಗುವುದು.
- ಜೇನು ಪೆಟ್ಟಿಗೆ: ವೆಚ್ಚ 2,000.00 ಸಹಾಯಧನ 800.00 ಗರಿಷ್ಠ ಮಿತಿ 50 ಪೆಟ್ಟಿಗೆ
- ಜೇನು ಕುಟುಂಬ: ವೆಚ್ಚ 2,000.00 ಸಹಾಯಧನ 800.00 ಗರಿಷ್ಠ ಮಿತಿ 50 ಕುಟುಂಬ
- ಜೇನು ಸಂಗ್ರಹಣಾ ಯಂತ್ರ: ವೆಚ್ಚ 20,000.00 ಸಹಾಯಧನ 8,000.00, ಗರಿಷ್ಠ ಮಿತಿ 1 ಯಂತ್ರ
ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ: ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಖರೀದಿಸುವ 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್’ಗೆ ಸಹಾಯಧನ ನೀಡಲು ಅವಕಾಶವಿದ್ದು, ಸಣ್ಣ, ಅತಿ ಸಣ್ಣ, ಮಹಿಳಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಒಟ್ಟು ವೆಚ್ಚದ ಶೇ.35 ರಂತೆ ಗರಿಷ್ಟ ರೂ. 1.00 ಲಕ್ಷ ಹಾಗೂ ಇತರೆ ರೈತರು ಒಟ್ಟು ವೆಚ್ಚದ ಶೇ.25 ರಂತೆ ಗರಿಷ್ಟ ರೂ.0.75 ಲಕ್ಷ ಸಹಾಯಧನವನ್ನು ಪ್ರಸಕ್ತ ಸಾಲಿನಲ್ಲಿ ಖರೀದಿಸಿ ನೊಂದಣಿ ಮಾಡುವ ರೈತರಿಗೆ ವಿತರಿಸಲಾಗುತ್ತದೆ. ಸದರಿ ಯೋಜನೆಯಡಿ ಸಹಾಯಧನ ಪಡೆಯುವ ರೈತರು ಕನಿಷ್ಟ 0.40 ಹೆಕ್ಟೇರ್ ಜಮೀನು ಹೊಂದಿರಬೇಕು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಸುತ್ತಿರಬೇಕು ಕುಂದಾಪ್ರ ಡಾಟ್ ಕಾಂ ಮಾಹಿತಿ.
ಪ್ಯಾಕ್ ಹೌಸ್ ಗೆ ಸಹಾಯಧನ: 9 ಮೀ ಉದ್ದ ಹಾಗೂ 6 ಮೀ ಅಗಲದ ಪ್ಯಾಕ್ ಹೌಸ್ ಅನ್ನು ಇಲಾಖಾ ಮಾರ್ಗಸೂಚಿಯಂತೆ ನಿರ್ಮಾಣ ಮಾಡುವ ರೈತರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಗರಿಷ್ಟ ರೂ. 2.00 ಲಕ್ಷ ಸಹಾಯಧನ ವಿತರಿಸಲಾಗುತ್ತದೆ. ಸದರಿ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಕನಿಷ್ಟ 1.00 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಅಥವಾ 2.00 ಹೆಕ್ಟೇರ್ ಬಹುವಾರ್ಷಿಕ ಬೆಳೆಗಳನ್ನು ಬೆಳೆಸುತ್ತಿರಬೇಕು
ಪ್ರಾಥಮಿಕ ಸಂಸ್ಕರಣಾ ಘಟಕ/ಬಹುಪಯೋಗಿ ಸಂಸ್ಕರಣಾ ಘಟಕಗಳಿಗೆ ಸಹಾಯಧನ: ಬ್ಯಾಂಕ್ ನಿಂದ ಅವದಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ. 40 ರಂತೆ ಗರಿಷ್ಟ ರೂ. 10.00 ಲಕ್ಷ ಸಹಾಯಧನ ನೀಡಲಾಗುತ್ತದೆ.
ತರಬೇತಿ ಹಾಗೂ ಪ್ರವಾಸಗಳು: ರೈತರ/ರೈತ ಗುಂಪುಗಳ ಬೇಡಿಕೆಗನುಗುಣವಾಗಿ ತರಭೇತಿ ಹಾಗೂ ಪ್ರವಾಸಗಳನ್ನು ಇಲಾಖೆಯಲ್ಲಿ ಲಭ್ಯ ಅನುದಾನದಲ್ಲಿ ಆಯೋಜಿಸಲಾಗುವುದು
ಸಹಾಯಧನ ಪಡೆಯುವ ವಿಧಾನ:
1. ನಿಗದಿತ ಚಟುವಟಿಕೆಗಳನ್ನು ಕೈಗೊಳ್ಳುವ ರೈತರು ಅರ್ಜಿಗಳನ್ನು ತಾಲೂಕು ತೋಟಗಾರಿಕೆ ಇಲಾಖಾ ಕಛೇರಿಗೆ ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಚಟುವಟಿಕೆ ಕೈಗೊಳ್ಳುವ ರೈತರ ವಿವರದೊಂದಿಗೆ ಹಾಗೂ ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುವುದು
2. ತಾಲೂಕು ಹಾಗೂ ಜಿಲ್ಲೆಗೆ ನಿಗದಿಪಡಿಸಿದ ಗುರಿಗನುಗುಣವಾಗಿ ಜೇಷ್ಠತೆಯ ಆದಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ನಿಗದಿತ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಾದೇಶ ನೀಡಲಾಗುವುದು
3. ಕಾರ್ಯಾದೇಶ ಪಡೆದ ರೈತರು ನಿಗದಿತ ಚಟುವಟಿಕೆಗಳನ್ನು ಕೈಗೊಂಡು, ಕಾರ್ಯಾದೇಶದಲ್ಲಿ ನಮೂದಿಸಿರುವ ದಾಖಲಾತಿಗಳನ್ನು ಸಲ್ಲಿಸುವುದು ಹಾಗೂ ಮಾರ್ಗಸೂಚಿ ಪ್ರಕಾರ ಸಹಾಯಧನ ಪಡೆಯಬಹುದುದಾಗಿದೆ/ಕುಂದಾಪ್ರ ಡಾಟ್ ಕಾಂ ಮಾಹಿತಿ/
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಜಿಲ್ಲಾ ಅಥವಾ ಸಂಬಂಧಿಸಿದ ತಾಲೂಕು ಮಟ್ಟದ ಈ ಕೆಳಗಿನ ಕಛೇರಿಯನ್ನು ಸಂಪರ್ಕಿಸುವುದು.
- ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ಜಿಲ್ಲೆ: 0820-2531950
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.),ಕುಂದಾಪುರ ತಾಲೂಕು: 08254-230813
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು: 08258-230288