Kundapra.com ಕುಂದಾಪ್ರ ಡಾಟ್ ಕಾಂ

ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿಲು ಸೂಚನೆ

ಉಡುಪಿ: ನೋಂದಾಯಿತ ಮತದಾರರು ಮತದಾರ ಪಟ್ಟಿಯನ್ನು ಬಿಎಲ್‌ಒ ಅಥವಾ ತಾಲೂಕು ಕಚೇರಿ ಮಟ್ಟದಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಪರಿಶೀಲಿಸಿ ತಿದ್ದುಪಡಿಗಳಿದ್ದರೆ ಬಿಎಲ್‌ಒ(ಮತಗಟ್ಟೆ ಮಟ್ಟದ ಅಧಿಕಾರಿ)  ಅವರಿಗೆ ಸಲ್ಲಿಸಲು ಕೋರಲಾಗಿದೆ.

ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು, ಭಾವಚಿತ್ರ, ಜನ್ಮ ದಿನಾಂಕ ಮತ್ತು ವಿಳಾಸ ಸರಿಯಾಗಿಯೇ ಎಂದು ಪರಿಶೀಲಿಸಬೇಕು. ಒಂದು ವೇಳೆ  ಸರಿ ಇಲ್ಲದೆ ಇದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಪೂರಕ ದಾಖಲೆಗಳೊಂದಿಗೆ ನಮೂನೆ 8ರಲ್ಲಿ ಅರ್ಜಿ ಮತ್ತು ಹೆಸರು ಎರಡು ಕಡೆ ನೋಂದಾಯಿಸಲ್ಪಟ್ಟಲ್ಲಿ ಇಲ್ಲವೆ ಒಂದೇ ಭಾಗದ ಎರಡು ಕಡೆ ನೋಂದಾವಣಿಯಾಗಿದ್ದಲ್ಲಿ ಯಾವುದಾದರೊಂದನ್ನು ರದ್ದುಪಡಿಸಲು ನಮೂನೆ 7ರಲ್ಲಿ ಸಲ್ಲಿಸಬೇಕು.

ಪ್ರತಿಯೊಬ್ಬ ಮತದಾರನು/ಳು ಆಧಾರ್‌, ಎಪಿಕ್‌, ಮೊಬೈಲ್‌ ಸಂಖ್ಯೆ ಮತ್ತು ಇ ಮೇಲ್‌ ಐಡಿ ವಿವರಗಳನ್ನು ಆಧಾರ್‌/ಎಪಿಕ್‌ ಕಾರ್ಡಿನ ಪ್ರತಿಗಳೊಂದಿಗೆ ತಮ್ಮ ವ್ಯಾಪ್ತಿಯ ಬಿಎಲ್‌ಒಗೆ ಕೂಡಲೇ ಒದಗಿಸಬೇಕು ಹಾಗೂ ಇಸಿಐ ವೆಬ್‌ಸೈಟ್‌ನ ನ್ಯಾಶನಲ್‌ ವೋಟರ್ ಸರ್ವಿಸ್‌ ಪೋರ್ಟಲ್‌ಗೆ (ಎನ್‌.ವಿ.ಎಸ್‌.ಪಿ) ಅಪ್‌ಲೋಡ್‌ ಮಾಡಬೇಕು. http://nvsp.in/ ಅಥವಾ ಎಸ್‌.ಎಂ.ಎಸ್‌ ಮೂಲಕ ECILINK send to 51969, 199 ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾಲ್‌ ಸೆಂಟರ್‌ ಸಂಖ್ಯೆ 1950ನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Exit mobile version