ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಮಿನಿ ವಿಧಾನಸೌಧದಲ್ಲಿರುವ ತಹಶಿಲ್ದಾರ್ ಕಚೇರಿ, ಎಸಿ ಕಚೇರಿ, ಉಪನೋಂದಣಿ ಕಚೇರಿ ಹಾಗೂ ಪುರಸಭೆ ಕಚೇರಿ, ಎಪಿಎಂಸಿ ಮಾರುಕಟ್ಟೆಗೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಿಢೀರ್ ಭೇಟಿ ಕೊಟ್ಟು ಕೊರೊನಾ ತಡೆಗಟ್ಟುವಿಕೆ ಕೈಗೊಂಡ ಮುಂಜಾಗೃತಾ ಕ್ರಮಗಳ ಪರಿಶೀಲನೆ ನಡೆಸಿದ ಘಟನೆ ನಡೆಸಿದರು.
ಈ ವೇಳೆ ಯಾವುದೇ ಸರ್ಕಾರಿ ಕಚೇರಿಯಲ್ಲಿ ಥರ್ಮಲ್ ಸ್ಕ್ಯಾನರ್ ಇರಲಿಲ್ಲ, ಭೇಟಿಕೊಟ್ಟವರ ದಾಖಲೆ ಪುಸ್ತಕ ನಿರ್ವಹಣೆ ಇಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂದಿದೆ. ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಮಾತ್ರವಲ್ಲದೆ ಮಾಸ್ಕ್ ಧರಿಸದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೂಡ ನೀಡಲಾಯಿತು.
ಎಸಿ ಕಚೇರಿಯಲ್ಲಿ ಕರ್ತವ್ಯ ಲೋಪ ಕಂಡುಬಂದಿದ್ದು ಹಾಜರಾತಿ ಪುಸ್ತಕದಲ್ಲಿ ಸಹಿಯೇ ಹಾಕದಿರುವ ಕೆಲವು ಸಿಬ್ಬಂದಿಗಳ ಬಗ್ಗೆಯೂ ತಪಾಸಣೆ ವೇಳೆ ತಿಳಿದುಬಂದಿದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮೆಮೋ ನೀಡುವುದಾಗಿ ಲೋಕಾಯುಕ್ತ ಡಿ.ವೈಎಸ್.ಪಿ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ:
► ಉಡುಪಿ ಜಿಲ್ಲೆ ಕೋವಿಡ್ ಅಪ್ಡೇಟ್: ಸೋಮವಾರ 18 ಪಾಸಿಟಿವ್ ದೃಢ – https://kundapraa.com/?p=39077 .
► ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಂಡ ವಿಶೇಷ ಕ್ರಮಗಳ ಪಾಲನೆ ಕಡ್ಡಾಯ: ಜಿಲ್ಲಾಧಿಕಾರಿ – https://kundapraa.com/?p=39079 .