Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ನಾಡದೋಣಿ ಮೀನುಗಾರರಿಂದ ಸಮುದ್ರ ಪೂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೀನುಗಾರರ ಆರಾಧ್ಯ ದೈವೀಕೇಂದ್ರವಾದ ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಸಮೀಪ ಕಡಲತೀರದಲ್ಲಿ ಕುಂದಾಪುರ ತಾಲ್ಲೂಕು ನಾಡದೋಣಿ ಮೀನುಗಾರರ ಒಕ್ಕೂಟ ಮತ್ತು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಸಂಯುಕ್ತವಾಗಿ ಭಾನುವಾರ ಸಾಂಪ್ರದಾಯಿಕ ಸಮುದ್ರ ಪೂಜೆ ಸಲ್ಲಿಸಿದವು.

ನಾಡದೋಣಿ ಮೀನುಗಾರಿಕೆ ಋತು ಆರಂಭಿಸುವ ಪೂರ್ವಭಾವಿಯಾಗಿ ಸುರಕ್ಷಿತ ಮತ್ತು ಸಮೃದ್ಧ ಮೀನುಗಾರಿಕೆಗಾಗಿ ಪ್ರಾರ್ಥಿಸಿ ಪ್ರತಿವರ್ಷ ಈ ಪೂಜೆ ನಡೆಸಲಾಗುತ್ತದೆ. ಅರ್ಚಕ ಆದರ್ಶ ಭಟ್ ಅಧ್ವರ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀರದಲ್ಲಿ ಮರಳಿನ ಸಮುದ್ರ ದೇವತೆಯ ಲಿಂಗ ರಚಿಸಿ ಅದಕ್ಕೆ ಪೂಜೆ ಮಾಡಲಾಯಿತು. ಆ ಬಳಿಕ ಸಮುದ್ರ ಪೂಜೆ ನೆರವೇರಿಸಿ ಕಡಲಿಗೆ ಬಾಗಿನ, ಹಾಲು ಸಮರ್ಪಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಇದನ್ನೂ ಓದಿ  ಉಪ್ಪುಂದ: ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡ ‘ಮತ್ಸ್ಯಸಿರಿ’ ಉದ್ಘಾಟನೆ – https://kundapraa.com/?p=39093 .

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್, ಕುಂದಾಪುರ ತಾಲ್ಲೂಕು ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಮಂಜು ಬಿಲ್ಲವ, ಬೈಂದೂರು ವಲಯ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ, ಮಾಜಿ ಅಧ್ಯಕ್ಷ ಸೋಮಶೇಖರ ಖಾರ್ವಿ, ಕೊಡೇರಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ದೇವರಾಜು, ಇತರ ಪ್ರಮುಖರು ಇದ್ದರು.

 

Exit mobile version