Kundapra.com ಕುಂದಾಪ್ರ ಡಾಟ್ ಕಾಂ

ಉದ್ಯೋಗ ಖಾತರಿ ಯೋಜನೆ ಸಾಧನೆ: ಹಕ್ಲಾಡಿ, ಕಟ್‌ಬೆಲ್ತೂರು, ಕಂದಾವರ, ಕೋಟ ಪಂಚಾಯತಿಗೆ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೂನ್ ಮಾಹೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ಕುಂದಾಪುರ ತಾಲೂಕಿನ ಹಕ್ಲಾಡಿ, ಕಟ್‌ಬೆಲ್ತೂರು, ಕಂದಾವರ ಹಾಗೂ ಬ್ರಹ್ಮವರ ತಾಲೂಕಿನ ಕೋಟ, ಬಿಲ್ಲಾಡಿ, ಕಾಡೂರು ಗ್ರಾಮ ಪಂಚಾಯತಿ ಪ್ರತಿನಿಧಿಗಳನ್ನು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಿನಕರ ಬಾಬು ಅಭಿನಂದಿಸಿದರು.

ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಡ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದ್ದು, 2020-21 ರ ಸಾಲಿನಲ್ಲಿ ಒಟ್ಟು 5.12 ಲಕ್ಷ ಮಾನವ ದಿನಗಳನ್ನು ಸೃಷ್ಠಿಸುವ ಗುರಿ ಹೊಂದಿದ್ದು, ಜೂನ್ ಅಂತ್ಯಕ್ಕೆ 1.64 ಲಕ್ಷ ಗುರಿ ಹೊಂದಲಾಗಿತ್ತು, ಈ ಸಾಲಿನಲ್ಲಿ ಈವರೆಗೆ 2.88 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು ಗುರಿಗೆ ಶೇ.56.25 ಪ್ರಗತಿ ಸಾದಿಸಿದ್ದು, ಜೂನ್ ಮಾಹೆಯ ಗುರಿಗೆ ಶೇ.175.60 ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಜೂನ್ ಮಾಹೆಯವರೆಗೆ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ, ಬಿಲ್ಲಾಡಿ ಗ್ರಾ.ಪಂ (11111 ಮಾನವ ದಿನಗಳು), ಹಕ್ಲಾಡಿ ಗ್ರಾ.ಪಂ (6817 ಮಾನವ ದಿನಗಳು), ಕಾಡೂರು ಗ್ರಾ.ಪಂ (6035 ಮಾನವ ದಿನಗಳು), ಕಟ್ಬೆಲ್ತೂರು ಗ್ರಾ.ಪಂ (5884 ಮಾನವ ದಿನಗಳು), ಕೋಟ ಗ್ರಾ.ಪಂ (5135 ಮಾನವ ದಿನಗಳು), ಕಂದಾವರ ಗ್ರಾ.ಪಂ (5059 ಮಾನವ ದಿನಗಳು) ಇವರಿಗೆ ಹಾಗೂ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ತಾಂತ್ರಿಕ ಸಾಹಕ ಅಭಿಯಂತರರಾದ ಓಂ ಪ್ರಕಾಶ್ (48063 ಮಾನವ ದಿನಗಳು), ಶ್ರೀಜಿತ್ (38318 ಮಾನವ ದಿನಗಳು),ಲೋಕೇಶ್ (31022 ಮಾನವ ದಿನಗಳು) ಅವರನ್ನು ಅಭಿನಂದಿಸಲಾಯಿತು.

ಇದನ್ನೂ ಓದಿ:
ಕೋವಿಡ್-19: ಮಂಗಳವಾರ 9 ಪಾಸಿಟಿವ್ ದೃಢ. ಕಾಲ್ತೋಡು ಗ್ರಾಮದ ಓರ್ವ ವ್ಯಕ್ತಿ ಮೃತ – https://kundapraa.com/?p=39109 .

Exit mobile version