Site icon Kundapra.com ಕುಂದಾಪ್ರ ಡಾಟ್ ಕಾಂ

ಭಾನುವಾರದ ಲಾಕ್ ಡೌನ್: ಅಗತ್ಯ ವಸ್ತು, ಸರಕು ಸಾಗಾಟ ಹೊರತುಪಡಿಸಿ ಯಾವುದೇ ಸೇವೆ ಲಭ್ಯವಿರಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ತರುವ ಸಲುವಾಗಿ ರಾಜ್ಯ ಸರಕಾರ ಭಾನುವಾರ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದು ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಅಗತ್ಯ ಸೇವೆ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಹೇಳಿದ್ದಾರೆ.

ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಆದರೆ 50 ಜನರಿಗಿಂತ ಹೆಚ್ಚಿನ ಜನರು ಸೇರುವಂತಿಲ್ಲ. ಸರಿಯಾದ ಮುಂಜಾಗೃತ ಕ್ರಮಗಳೊಂದಿಗೆ, ತಹಶೀಲ್ದಾರರ ಅನುಮತಿ ಪಡೆದು, ಕಾರ್ಯಕ್ರಮ ನಡೆಸಬಹುದು ಎಂದು ಉಡುಪಿ ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಅಗತ್ಯ ಸೇವೆಗಳಾದ ಮೆಡಿಕಲ್ ಶಾಪ್, ಆಸ್ಪತ್ರೆ, ಹಾಲು, ಪೇಪರ್ ಗಳಿಗೆ ಅವಕಾಶವಿದೆ. ಈ ಕುರಿತು ಮಾಹಿತಿ ನೀಡಿದ ಅವರು, ಭಾನುವಾರ ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ.ತರಕಾರಿ ಮೀನು-ಮಾಂಸ ಸೇರಿದಂತೆ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುತ್ತದೆ. ಅನವಶ್ಯಕವಾಗಿ ತಿರುಗಾಟವವರ ಮೇಲೆ ವಾಹನ ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ನಾಳೆಯ ಭಾನುವಾರ ಸೇರಿದಂತೆ ಮುಂದಿನ ನಾಲ್ಕು ಭಾನುವಾರವೂ ಇದೇ ಮಾದರಿಯಲ್ಲಿ ಲಾಕ್’ಡೌನ್ ಜಾರಿಯಲ್ಲಿರಲಿದೆ.

ಇದನ್ನೂ ಓದಿ:
► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶನಿವಾರ 19 ಪಾಸಿಟಿವ್ ದೃಢ – https://kundapraa.com/?p=39232 .

Exit mobile version