ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಹಾಗೂ ಸುಬ್ಬಯ್ಯ ದೇವಾಡಿಗ ಎಂಬುವವರ ಕುಟುಂಬಕ್ಕೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನಿಂದ ನಿರ್ಮಿಸಿಕೊಟ್ಟ ನೂತನ ಗೃಹ ‘ಶ್ರೀ ಕೃಷ್ಣ ನಿಲಯ’ ಇದರ ಉದ್ಘಾಟನಾ ಸಮಾರಂಭ ಸೋಮವಾರ ಜರುಗಿತು.
ನೂತನ ಗೃಹವನ್ನು ಬಾಬು ಪೂಜಾರಿ – ಮಂಜಮ್ಮ ದಂಪತಿಗಳು ಉದ್ಘಾಟಿಸಿದರು. ಈ ಸಂದರ್ಭ ಉಡುಪಿ ಜ್ಯೋತಿಷಿಗಳಾದ ರಘುನಾಥ ಜೋಯಿಸ್, ಮುಖಂಡರುಗಳಾದ ಎಸ್. ರಾಜು ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ಮದನಕುಮಾರ್ ಉಪ್ಪುಂದ, ಗೌರಿ ದೇವಾಡಿಗ, ಮಹೇಂದ್ರ ಪೂಜಾರಿ, ಜಗದೀಶ ದೇವಾಡಿಗ, ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ, ಟ್ರಸ್ಟೀಗಳಾದ ಮಾಲತಿ ಗೋವಿಂದ ಪೂಜಾರಿ, ರಾಮ ಬಿಜೂರು, ಸದಸ್ಯರುಗಳಾದ ಜಯರಾಮ ಶೆಟ್ಟಿ, ನರಸಿಂಹ ನಾಯಕ್, ಉದ್ಯಮಿ ಗುರುರಾಜ ಪೂಜಾರಿ, ರಾಮ ಪೂಜಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:
► ಸ್ವಂತ ಸೂರು ನಿರ್ಮಿಸುವ ಕನಸು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಕಾರ – https://kundapraa.com/?p=39208 .
