Kundapra.com ಕುಂದಾಪ್ರ ಡಾಟ್ ಕಾಂ

ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಅಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: 2020-21 ನೇ ಸಾಲಿನ ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ಹೆಚ್ಚಿನ ತರಬೇತಿ ಪಡೆಯಲು 2 ವರ್ಷದ ತರಭೇತಿ ಅವಧಿಗೆ ಮಾಸಿಕ ರೂ.10000/- ಹಾಗೂ ಕಾನೂನು ವೃತ್ತಿಗೆ ಸಂಬAಧಿಸಿದ ಪುಸ್ತಕಗಳಿಗೆ ತರಬೇತಿ ಅವಧಿಯಲ್ಲಿ ರೂ 5,000/- ನೀಡುವ ಬಗ್ಗೆ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆದಾಯ ಮಿತಿರೂ 2,00,000/-ದೊಳಗಿರಬೇಕು. ಅರ್ಜಿ ಪ್ರತಿಯನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ ಜಿಲ್ಲಾ ಸಂಕಿರ್ಣ ,ಬಿ ಬ್ಲಾಕ್ ,ಎರಡನೇ ಮಹಡಿ,ರಜತಾದ್ರಿ ,ಮಣಿಪಾಲ ಈ ಕಛೇರಿಯಿಂದ ಪಡೆದು ಜುಲೈ 31 ರೊಳಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ  0820-2574814 ಸಂಪರ್ಕಿಸಬಹುದು.

 

 

Exit mobile version