Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಎಎಸ್ಪಿ ಕಛೇರಿ ಸಿಬ್ಬಂದಿ ಸೇರಿದಂತೆ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಉಪವಿಭಾಗದ ಎಎಸ್ಪಿ ಕಚೇರಿ ಸಿಬ್ಬಂದಿ ಸೇರಿದಂತೆ ಒಟ್ಟು ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಪಾಸಿಸಿಟವ್ ಬಂದಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿ ಸಿಬ್ಬಂದಿ, ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್‌ಐ ಹಾಗೂ ಚಾಲಕನಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಎಎಸ್ಪಿ ಕಚೇರಿ ಸಿಬ್ಬಂದಿ ಜುಲೈ 2ರಿಂದ ಹಾಗೂ ಟ್ರಾಫಿಕ್ ಠಾಣೆ ಎಎಸ್‌ಐ, ಸಿಬ್ಬಂದಿ ಜುಲೈ 5 ರಿಂದ ಹೋಂ ಕ್ವಾರಂಟೈನ್‌ನಲ್ಲಿ ಇದ್ದು ಕಛೇರಿಗೆ ಹಾಜರಾಗಿರಲಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಮುಚ್ಚಿ ಸ್ಯಾನಿಟೈಸರ್ ಮಾಡಲಾಗುತ್ತದೆ. ಕುಂದಾಪುರ ಟ್ರಾಫಿಕ್ ಠಾಣೆ ಮಾಮೂಲಿಯಂತೆ ನಡೆಯಲಿದೆ. ಎಎಸ್ಪಿ ಕಚೇರಿ ಕೆಲಸಗಳು ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ನಡೆಯಲಿದೆ. ಕುಂದಾಪುರ ಉಪವಿಭಾಗಕ್ಕೆ ಉಡುಪಿ ಡಿವೈಎಸ್ಪಿ ಅವರನ್ನು ಪ್ರಭಾರ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಕೋವಿಡ್ ಸೋಂಕಿಗೆ 70 ವರ್ಷದ ಬೈಂದೂರಿನ ವೃದ್ಧ ಸಾವು – https://kundapraa.com/?p=39461 .

 

Exit mobile version