Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಸೋಮವಾರ 53 ಪಾಸಿಟಿವ್ ದೃಢ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.13ರ ಸೋಮವಾರ 53 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ ತಾಲೂಕಿನ 27, ಕುಂದಾಪುರ ತಾಲೂಕಿನ 23 ಹಾಗೂ ಕಾರ್ಕಳ ತಾಲೂಕಿನ 3 ಮಂದಿ ಇದ್ದು ಒಟ್ಟು ಪ್ರಕರಣದಲ್ಲಿ 31 ಪುರುಷರು, 18 ಮಹಿಳೆಯರು ಹಾಗೂ 4 ಮಕ್ಕಳು ಇದ್ದಾರೆ.

ಬೈಂದೂರು ತಾಲೂಕು ಉಪ್ಪುಂದದ 70 ವರ್ಷದ ವೃದ್ಧರೊಬ್ಬರಿಗೆ ಕಳೆದ 15 ದಿನಗಳ ಹಿಂದೆ ಕೋವಿಡ್ ದೃಢ ಪಟ್ಟ ಹಿನ್ನೆಲೆಯಲ್ಲಿ ಅವರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಕೆ ಕಂಡಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ. ಕುಂದಾಪುರದ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಪಾಸಿಟಿವ್ ದೃಢವಾಗಿದೆ.

260 ನೆಗೆಟಿವ್:
ಈ ತನಕ ಒಟ್ಟು 22,533 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 19,123 ನೆಗೆಟಿವ್, 1,661 ಪಾಸಿಟಿವ್ ಬಂದಿದ್ದು, 1,749 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 260 ನೆಗೆಟಿವ್, 53 ಪಾಸಿಟಿವ್ ಬಂದಿದೆ. ಒಟ್ಟು 1,401 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.

378 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,661 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,280 ಮಂದಿ ಬಿಡುಗಡೆಯಾಗಿದ್ದು, 378 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ನಾಲ್ವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ:
► ಕುಂದಾಪುರ: 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವನ ವಿರುದ್ಧ ಕೇಸು ದಾಖಲು – https://kundapraa.com/?p=39476 .
► ಕೋವಿಡ್ ಸೋಂಕಿಗೆ 70 ವರ್ಷದ ಬೈಂದೂರಿನ ವೃದ್ಧ ಸಾವು – https://kundapraa.com/?p=39461 .
► ಕುಂದಾಪುರ: ಎಎಸ್ಪಿ ಕಛೇರಿ ಸಿಬ್ಬಂದಿ ಸೇರಿದಂತೆ ಮೂವರು ಪೊಲೀಸರಿಗೆ ಕೋವಿಡ್ ಪಾಸಿಟಿವ್ – https://kundapraa.com/?p=39463 .

Exit mobile version