Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿಯುಸಿ: ಆಳ್ವಾಸ್‌ಗೆ ಶೇ 99.06% ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ.99.06 ಫಲಿತಾಂಶ ದಾಖಲಿಸಿದೆ. ರಾಜ್ಯದ ಟಾಪ್ 10 ಪಟ್ಟಿಯಲ್ಲಿ ಕಾಲೇಜಿನ 22 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಕಾಲೇಜಿನಲ್ಲಿ ಪ್ರಸಕ್ತ ವರ್ಷ 2779 ಮಂದಿ ಪರೀಕ್ಷೆ ಬರೆದಿದ್ದು, 2753 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2229 ವಿದ್ಯಾರ್ಥಿಗಳು ಹಾಜರಾಗಿ 2209 ಮಂದಿ ಉತ್ತೀರ್ಣರಾಗಿದ್ದು, ಶೇ.99.10 ಪಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 502 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 496 ಮಂದಿ ಉತ್ತೀರ್ಣರಾಗಿ ಶೇ. 98.80 ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ.

ಟಾಪ್ 10ನಲ್ಲಿ 22 ವಿದ್ಯಾರ್ಥಿಗಳು:
ಪಿಯುಸಿಯ ಮೂರೂ ವಿಭಾಗಗಳಲ್ಲಿ ಒಟ್ಟು 22 ಮಂದಿ ವಿದ್ಯಾರ್ಥಿಗಳು ರಾಜ್ಯದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಜ್ಣಾನ ವಿಭಾಗದಲ್ಲಿ ಅನರ್ಘ್ಯ ಕೆ.(592), ರಘುವೀರ್ ಮಠದ(592) ಲಿಶನ್ ಎಎ(592), ಅನಿಲ್ ಬಣ್ಣಿ ಶೆಟ್ಟಿ (589) ಭಗೇಶ್ ಎನ್. ಕೊಡಗನೂರು, ವಿನಾಯಕ ಜಿ.ಗಡ್ಡಿ , ಸುವೀಕ್ಷ್ ವಿ. ಹೆಗ್ಡೆ, ಮಹೇಶ್ವರಿ ಹೆಚ್ಸಿ. ( ಎಲ್ಲರೂ 588) ಸ್ವಾತಿ ಬಿ ಮಳೆಮಠ್, ಪಿ.ಎಸ್.ರವೀಂದ್ರ, ಧನ್ಯ ಕೆ.ಎನ್,(ಎಲ್ಲರೂ 587)ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಹರ್ಷ ಜೆ.ಆಚಾರ್ಯ (593) ಈಶ್ವರ್ ವಿಜಯಸ್ವಾಮಿ ಎಲಗಾರ್ (591) ಶ್ರೇಯಾ ಕೆ.ಬಿ (591) ವಡಗಾವೆ ಓಂ ಅಮೊಲ್ (591)ಪ್ರತೀತಾ (590) ರಿಹಾಲ್ ಅಯ್ಯಪ್ಪ ಎಂ.ಎಸ್. (590) ಶ್ರೀಸಮರ್ಥ, ಭಾರ್ಗವಿ ಬಿ, ಚಂದನ ಡಿ ಹೆಗ್ಡೆ,ಪ್ರಿಯಾಂಕಾ ಜಿ. ಧನ್ಯ ಐಶ್ವರ್ಯಎಂ.(ಎಲ್ಲರೂ 589) ಪಡೆದಿದ್ದಾರೆ.

ವಿಷಯವಾರು ಒಟ್ಟು 747 ಪೇಪರ್‌ಗಳಲ್ಲಿ ಶೇ ನೂರು ಫಲಿತಾಂಶ ದಾಖಲಾಗಿದೆ. ಈ ಪೈಕಿ ಗಣಿತ ವಿಷಯದಲ್ಲಿ 298 ಪೇಪರ್‌ಗಳಲ್ಲಿ ಶೇ ನೂರು ಫಲಿತಾಂಶ ಬಂದಿದೆ. 1767 ಡಿಸ್ಟಿಂಕ್ಷನ್ 2658 ಮಂದಿ ಪ್ರಥಮ ದರ್ಜೆ, 74 ಮಂದಿ ದ್ವಿತೀಯ ಶ್ರೇಣಿ, 22 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

 

Exit mobile version