Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಕೋಣಗಳ ಸಾಗಾಟ : ಆರೋಪಿಗಳು ಪರಾರಿ

ಬೈಂದೂರು: ಇಲ್ಲಿಗೆ ಸಮೀಪದ ನಾವುಂದದಲ್ಲಿ ಒಂದೇ ಲಾರಿಯಲ್ಲಿ ೧೯ ಕೋಣಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ವೇಳೆಗೆ, ಮಾಹಿತಿಯ ಮೇರೆಗೆ ದಾಳಿ ನಡೆಸಲು ಮುಂದಾದ ಬೈಂದೂರು ಠಾಣೆ ಪೊಲೀಸರು ಬುಧವಾರ ಮುಂಜಾನೆ ಲಾರಿಯನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲು ಮಂದಾದಾಗ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಬುಧವಾರ ಬೆಳಿಗ್ಗೆ 5:30 ರ ಸುಮಾರಿಗೆ ನಾವುಂದದ ಪೆಟ್ರೋಲ್ ಬಂಕ್ ಬಳಿ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಬೈಂದೂರು ಪೊಲೀಸರು ಒತ್ತೊತ್ತಾಗಿ, ಹಿಂಸಾತ್ಮಕವಾಗಿ ಕೋಣಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ತಡೆದು ಅದರಲ್ಲಿದ್ದ ೧೯ ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕೋಣಗಳನ್ನು ಅಕ್ರಮವಾಗಿ ಕೇರಳದ ಖಸಾಯಿಖಾನೆಗೆ ಸಾಗಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. 19ಕೋಣಗಳನ್ನು ಬೈಂದೂರು ಠಾಣೆಯಲ್ಲಿಯೇ ಕಟ್ಟಿ ನೀರು ಮೇವು ನೀಡಲಾಯಿತು.  ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Exit mobile version