Site icon Kundapra.com ಕುಂದಾಪ್ರ ಡಾಟ್ ಕಾಂ

ಸಂಗೀತ ಸ್ಪರ್ಧೆ: ರಂಜನಾ ಭಟ್ ದ್ವಿತೀಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಂಗಳೂರಿನ ಸೃಷ್ಟಿ ಕಲಾ ವಿದ್ಯಾಲಯ ಈಚೆಗೆ ನಡೆಸಿದ ಮುಕ್ತ ಆನ್‌ಲೈನ್ ಸಂಗೀತ ಸ್ಪರ್ಧೆಯ ಹಿರಿಯರ ಭಾವಗೀತೆ ವಿಭಾಗದಲ್ಲಿ ಇಲ್ಲಿನ ರಂಜನಾ ಭಟ್ ದ್ವಿತೀಯ ಸ್ಥಾನ ಗಳಿಸಿರುವರು. ಸ್ಪರ್ಧೆಯಲ್ಲಿ ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದ 725 ಜನ ಭಾಗವಹಿಸಿದ್ದರು. ರಂಜನಾ ಭಟ್ ಇಲ್ಲಿನ ಎಸ್. ಹರ್ಷ ಭಟ್ – ರೇವತಿ ಭಟ್ ದಂಪತಿಯ ಪುತ್ರಿ.

Exit mobile version