Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮೂರು ರಾಷ್ಟ್ರೀಕೃತ ಬ್ಯಾಂಕುಗಳು ಸೀಲ್ ಡೌನ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬ್ಯಾಂಕ್ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೈಂದೂರಿನ ಮೂರು ರಾಷ್ಟ್ರೀಕೃತ ಬ್ಯಾಂಕುಗಳನ್ನು ಸೀಲ್ ಡೌನ್ ಮಾಡಲಾಗಿದೆ. ಬೈಂದೂರಿನ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೀಲ್ ಡೌನ್ ಮಾಡಲಾಗಿದೆ.

ಸದ್ಯ ಇಲ್ಲಿನ ಸಿಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಕೆನರಾ ಬ್ಯಾಂಕ್ ಸೋಮವಾರ ಸೀಲ್ ಡೌನ್ ಆಗಿದ್ದು, ಇಂದು ಮತ್ತೊಬ್ಬ ಸಿಬಂದಿಗೆ ಕೋವಿಡ್ ಪಾಸಿಟಿವ್ ಧ್ರಡಪಟ್ಟಿದೆ. ಸದ್ಯ ಬ್ಯಾಂಕ್ ವ್ಯವಹಾರಗಳನ್ನು ಮೂರು ದಿನ ಸ್ಥಗಿತಗೊಳಿಸಲಾಗಿದೆ.

Exit mobile version