Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿಯಲ್ಲಿ ತೀವ್ರ ಕಡಲ್ಕೊರೆತದಿಂದಾಗಿ ತಡೆಗೋಡೆ ಪೂರ್ಣ ಕುಸಿತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋಡಿ ಗ್ರಾಮದ ಮಧ್ಯಕೋಡಿ ವ್ಯಾಪ್ತಿಯಲ್ಲಿ ಕಡಲ್ಕೊರೆತದ ತೀವ್ರತೆಗೆ ಹಳೆಯ ತಡೆಗೋಡೆ ಪೂರ್ಣ ಕುಸಿತ ಕಂಡಿದೆ. ಸುಮಾರು 200 ಮೀಟರ್ ಅಂತರದಲ್ಲಿಎರಡು ಕಡೆ ತೀವ್ರ ಕೊರೆತ ಸಂಭವಿಸಿದೆ. ಅಲೆಗಳ ಹೊಡೆತಕ್ಕೆ ಕಲ್ಲುಗಳು ಸಮುದ್ರ ಪಾಲಾಗಿದೆ. ಭಾರಿ ಅಲೆಗಳು ಅಪ್ಪಳಿಸುತ್ತಿದ್ದು ನೀರು ರಸ್ತೆಗೆ ಚಿಮ್ಮುತ್ತಿದೆ.

ಕಳೆದ ಕೆಲವು ದಿನಗಳಿಂದ ಕಡಲು ಅಬ್ಬರಿಸುತ್ತಿದ್ದು ಕಳೆದೆರಡು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ತಡೆಗೋಡೆಗೆ ಹೊಂದಿಕೊಂಡಿರುವ ವಿದ್ಯುತ್ ಮಾರ್ಗದ ಕಂಬಗಳು ಅಪಾಯಕ್ಕೆ ಸಿಲುಕಿವೆ. ರಸ್ತೆ ಕೊಚ್ಚಿಹೋಗುವ ಆತಂಕ ಎದುರಾಗಿದೆ. ಸಂಬಂಧಿತ ಇಲಾಖೆ ಕೂಡಲೆ ಕ್ರಮ ವಹಿಸಿ ರಕ್ಷಣೆ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version