Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಬುಧವಾರ 173 ಪಾಸಿಟಿವ್, 1244 ನೆಗೆಟಿವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.05ರ ಬುಧವಾರ 173 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 57, ಉಡುಪಿ ತಾಲೂಕಿನ 76 ಹಾಗೂ ಕಾರ್ಕಳ ತಾಲೂಕಿನ 39 ಮಂದಿಗೆ ಪಾಸಿಟಿವ್ ಬಂದಿದೆ. ಓರ್ವ ಬೇರೆ ಜಿಲ್ಲೆಯವರಾಗಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ 99 ಪುರುಷರು, 74 ಮಹಿಳೆಯರು ಸೇರಿದ್ದಾರೆ. ಇಂದು 124 ಮಂದಿ ಬಿಡುಗಡೆಗೊಂಡಿದ್ದಾರೆ. ಉಡುಪಿ ತಾಲೂಕಿನ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

1244 ನೆಗೆಟಿವ್:
ಈ ತನಕ ಒಟ್ಟು 38053 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 31770 ನೆಗೆಟಿವ್, 5143 ಪಾಸಿಟಿವ್ ಬಂದಿದ್ದು, 1140 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1244 ನೆಗೆಟಿವ್, 173 ಪಾಸಿಟಿವ್ ಬಂದಿದೆ. ಒಟ್ಟು 1071 ಮಂದಿ ಹೋಮ್ ಕ್ವಾರಂಟೈನ್ ಹಾಗೂ 1140 ಮಂದಿ ಆಸ್ಪತ್ರೆ ಐಸೋಲೇಶನಿನಲ್ಲಿದ್ದಾರೆ.

2,027 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 5143 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 3072 ಮಂದಿ ಬಿಡುಗಡೆಯಾಗಿದ್ದು, 2027 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 44 ಮಂದಿ ಮೃತಪಟ್ಟಿದ್ದಾರೆ.

 

Exit mobile version