Kundapra.com ಕುಂದಾಪ್ರ ಡಾಟ್ ಕಾಂ

ಪತ್ರಿಕೆಗೆ ನೀಡಿದ ಚೆಕ್‌ ಅಮಾನ್ಯ ಪ್ರಕರಣ: ಶಿಕ್ಷೆ

ಉಡುಪಿ: ಪತ್ರಿಕೆಗೆ ನೀಡಿದ ಚೆಕ್‌ ಅಮಾನ್ಯ ಪ್ರಕರಣದಲ್ಲಿ ಕುಂದಾಪುರ ಸಿಂಧೂರ ಗ್ರಾಫಿಕ್ಸ್‌ನ ಕೆ. ಗಣೇಶ ಹೆಗಡೆ ಅವರಿಗೆ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ಗಣೇಶ ಹೆಗಡೆ ಅವರು ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ ನೀಡಿದ್ದ ಚೆಕ್‌ಗಳು ಅಮಾನ್ಯಗೊಂಡ ಬಗ್ಗೆ ಒಟ್ಟು 13 ಪ್ರಕರಣಗಳನ್ನು ಎದುರಿಸುತ್ತಿದ್ದು, ಎಲ್ಲಾ ಪ್ರಕರಣಗಳಲ್ಲಿ ಅವರಿಗೆ ಶಿಕ್ಷೆಯಾಗಿದೆ.

ಸಿ.ಸಿ.ನಂಬರ್‌ 5482/07, 5481/07, 5459/07, 5489/07, 5456/07, 5454/07, 5455/07, 5457/07 ಎಂಬ 8 ಪ್ರಕರಣಗಳಿಗೆ ಅನ್ವಯವಾಗುವಂತೆ 1 ತಿಂಗಳ ಸಾದಾ ಸಜೆ ಮತ್ತು 1,50,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಶಿಕ್ಷೆ ಅನುಭವಿಸ ಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.

ಸಿ.ಸಿ.ನಂಬರ್‌ 6430/07 ಪ್ರಕರಣಕ್ಕೆ ಸಂಬಂಧಿಸಿ 1 ತಿಂಗಳ ಸಾದಾ ಸಜೆ ಮತ್ತು 55,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳ ಸಾದಾ ಶಿಕ್ಷೆ, ಸಿ.ಸಿ. ನಂಬರ್‌ 6853/07 ರಲ್ಲಿ 1 ತಿಂಗಳ ಸಾದಾ ಶಿಕ್ಷೆ ಮತ್ತು 25,000 ರೂ. ದಂಡ ಹಾಗೂ ದಂಡ ಪಾವತಿಗೆ ತಪ್ಪಿದಲ್ಲಿ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಸಜೆ, ಸಿ.ಸಿ.ನಂಬರ್‌ 6428/07 ರಲ್ಲಿ 1 ತಿಂಗಳ ಸಾದಾ ಶಿಕ್ಷೆ ಮತ್ತು 15,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳ ಸಾದಾ ಸಜೆ, ಸಿ.ಸಿ.ನಂಬರ್‌ 289/07 ರಲ್ಲಿ 1 ತಿಂಗಳ ಸಾದಾ ಶಿಕ್ಷೆ ಮತ್ತು 35,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಲಾಗಿದೆ.

ತೀರ್ಪನ್ನು ಪ್ರಶ್ನಿಸಿ ಆರೋಪಿ ಗಣೇಶ ಹೆಗಡೆ ಅವರು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾ ಮಾಡಿದೆ ಹಾಗೂ ಕೆಳಗಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಮಾತ್ರವಲ್ಲದೆ ಆರೋಪಿಯು 5 ಪ್ರಕರಣಗಳಿಗೆ (ಸಿ.ಸಿ.ನಂ. 5457/07, 6853/07, 6437/07, 289/07, 6428/07) ಸಂಬಂಧಿಸಿ ಠೇವಣಿ ಇರಿಸಿದ್ದ ಹಣವನ್ನು ದಂಡದ ಮೊತ್ತದೊಂದಿಗೆ ಹೊಂದಾಣಿಕೆ ಮಾಡುಕೊಂಡು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಕೋರಿ ಆರೋಪಿ ಪರ ವಕೀಲರು ಸಲ್ಲಿಸಿದ ಮನವಿಯನ್ನು ಕೂಡಾ ನ್ಯಾಯಾಲಯ ತಳ್ಳಿ ಹಾಕಿದೆ ಮತ್ತು ಆರೋಪಿಯನ್ನು ತೀರ್ಪಿನ ಪ್ರಕಾರ ಜೈಲಿಗೆ ಕಳುಹಿಸಬೇಕು ಹಾಗೂ ಈ ಬಗ್ಗೆ ಶಿಕ್ಷೆಯ ವಾರಂಟ್‌ ಹೊರಡಿಸುವಂತೆ ಆದೇಶಿಸಿದೆ.

Exit mobile version