ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಗುಜ್ಜಾಡಿ ಸ್ಥಾನೀಯ ಸಮಿತಿ ವತಿಯಿಂದ ಗುಜ್ಜಾಡಿಯ ವಿವಿಧ ದೇವಾಲಯಗಳಲ್ಲಿ ಬುಧವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರಾಮ ಮಂದಿರ ಶಿಲಾನ್ಯಾಸ ಸುಮುರ್ಹೂತದಲ್ಲಿ ಕಾರ್ಯಕ್ರಮದ ನೆನಪಿಗಾಗಿ ಬಿಜೆಪಿ ಕಾರ್ಯಕರ್ತರು ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಬೆಣ್ಗೆರೆ ಶ್ರೀ ನಾಗ ದೇವಸ್ಥಾನ ಹಾಗೂ ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನದ ವಠಾರದಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಪ್ರಾರ್ಥಿಸಿದರು. ಪುರೋಹಿತರಾದ ಜಿ.ವಸಂತ ಭಟ್, ಜಿ.ಅಜಿತ್ ಭಟ್, ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಪಕ್ಷದ ಮುಖಂಡರಾದ ಶೇಖರ ದೇವಾಡಿಗ, ಮೋಹನ ನಾಯ್ಕ್ ಗುಜ್ಜಾಡಿ, ದೇವದಾಸ ಖಾರ್ವಿ, ರೋಹಿದಾಸ ನಾಯಕ್, ಶ್ರೀನಾಥ ಮೊಗವೀರ, ಪ್ರಶಾಂತ ನಾಯ್ಕ್, ಗುರುರಾಜ್ ಗಾಣಿಗ, ಅಶೋಕ ನಾಯ್ಕ್, ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಭಜಕರು ಮತ್ತಿತರರು ಉಪಸ್ಥಿತರಿದ್ದರು.