Kundapra.com ಕುಂದಾಪ್ರ ಡಾಟ್ ಕಾಂ

ಕಲಾಕ್ಷೇತ್ರ – ಕುಂದಾಪುರದ ಪ್ರಬಂಧ ಸ್ವರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡ ಮಾತನಾಡುವ ಮಂದಿಯ ನಡೆ ನುಡಿ, ಆಚಾರ ವಿಚಾರದ ಬಗ್ಗೆ ಯುವಪೀಳಿಗೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಯಾವಾಗ ಯುವ ಜನಾಂಗ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಾರೋ ಆಗ ಅದು ಅಮರವಾಗುತ್ತದೆ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.

ಅವರು ಕಲಾಕ್ಷೇತ್ರ-ಕುಂದಾಪುರದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆಯ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿ ಉದಯ ಶೆಟ್ಟಿ ಪಡುಕೆರೆ ಮಾತನಾಡುತ್ತಾ ಹಲವಾರು ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರ ಪ್ರಶಂಸೆಗೆ ಪಾತ್ರರಾದ ಕಲಾಕ್ಷೇತ್ರ-ಕುಂದಾಪುರ ಇವರು ಮುಂದಿನ ವರ್ಷ ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನವನ್ನು ಆಯೋಜಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ನೆರ‍್ಮನಿ ಹಾಳಾರೂ ಅಡ್ಡಿಲ್ಲೆ ಕರಿನ್ ಕಟ್ಟುಕೆ ಜಾಗ ಆಯ್ತ್ ಅಂದಿನಂಬ್ರ್’ ಎಂಬ ಚಾಟೋಕ್ತಿಯ ಮೇಲೆ ಎರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ಧ್ವಿತೀಯ ಮತ್ತು ತೃತೀಯ ವಿಜೇತರಾಗಿ ಕ್ರಮವಾಗಿ ಆಯ್ಕೆಯಾದ ಮಂಜುನಾಥ ಹಿಲಿಯಾಣ, ಕೆ. ಸ್ವರಾಜ್ಯ ಲಕ್ಷ್ಮೀ ಮತ್ತು ಮಾನ್ಯತ್ ಶೆಟ್ಟಿ ವಂಡ್ಸೆ ಇವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ರಾಜೇಶ್ ಕಾವೇರಿ ಸ್ವಾಗತಿಸಿದರು, ಕಿಶೋರ್ ಕುಮಾರ್ ಪ್ರಸ್ತಾವನೆ ಮಾಡಿದರು, ತ್ರಿವಿಕ್ರಮ ಪೈ ವಂದಿಸಿದರು. ಈ ಸಂದರ್ಭದಲ್ಲಿ ಕಲಾಕ್ಷೇತ್ರ-ಕುಂದಾಪುರ ಸಂಸ್ಥೆಯ ಪ್ರಮುಖರಾದ ದಾಮೋದರ ಪೈ, ಪ್ರವೀಣ್ ಕುಮಾರ್ ಟಿ, ಗಿರೀಶ್ ಜಿ.ಕೆ, ಭರತ್ ನಾಯ್ಕ್, ಸುರೇಶ್ ನಾಯ್ಕ್ ಮದ್ದುಗುಡ್ಡೆ, ಸಾಯಿನಾಥ್ ಶೇಟ್, ಪ್ರಶಾಂತ್ ಸಾರಂಗ್ ಉಪಸ್ಥಿತರಿದ್ದರು.


 

Exit mobile version