ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಪೊಲೀಸ್ ಠಾಣೆಗೆ ಮಂಗಳವಾರ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು.
ಬೈಂದೂರು ಠಾಣೆ ಪಿಎಸ್ಐ ಸಂಗೀತಾ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಲಾಯಿತು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರ ನಿರ್ದೇಶನದಂತೆ ಟ್ರಸ್ಟೀ ರಾಮ ಬಿಜೂರು, ಸದಸ್ಯ ಜಯರಾಮ ಶೆಟ್ಟಿ, ಕೃಷ್ಣ ಬಿಜೂರು ಈ ಸಂದರ್ಭ ಇದ್ದರು.