ಕುಂದಾಪುರ: ಜ್ಞಾನ ವಿಕಸನ ಪ್ರತಿಯೊಬ್ಬರ ಬೌದ್ಧಿಕಮಟ್ಟವನ್ನು ವಿಸ್ತರಿಸಿ ಅಮೂಲಾಗ್ರವಾದ ಬದಲಾವಣೆಯನ್ನು ತರುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಅದುದರಿಮದ ರೋಟರಿ ಕ್ಲಬ್ ಪ್ರಸಕ್ತ ಸಾಲಿನಲ್ಲಿ ಜ್ಞಾನದ ಹಸಿವನ್ನು ಇಂಗಿಸಿ ಪ್ರಭುದ್ಧತೆಯ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಿದೆ ಇದರಿಂದ ಎಳವೆಯಲ್ಲಿಯೇ ಸ್ವಾವಲಂಬನೆಯ ಚಿಂತನೆ ಬೆಳೆದು ಭವಿಷ್ಯದಲ್ಲಿ ಸುಧೃಢವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹೇಳಿದರು.
ಅವರು ಜುಲೈ 19ರಂದು ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ಕೆದೂರಿನ ಸ್ಫೂರ್ತಿಧಾಮದ ವಿದ್ಯಾರ್ಥಿಗಳಿಗೆ ರೋಟರಿ ಚತುರ್ವಿಧ ಪರೀಕ್ಷೆಯ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ರೋಟರಿ ವಲಯ-1ರ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಚತುರ್ವಿಧ ಪರೀಕ್ಷೆಯ ಮಾಹಿತಿ ನೀಡಿ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸುನಿಲ್ ಕೆ.ಯು. ಮೈಸೂರು ಹಾಗೂ ಪ್ರೇಮಾ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಸತೀಶ್ ಬಳೆಗಾರ ಪಡೆದುಕೊಂಡರು. ಕುಂದಾಪುರ ರಕ್ತನಿಧಿ ಕೇಂದ್ರದ ಕೋ-ಆರ್ಡಿನೇಟರ್ ಆವರ್ಸೆ ಮುತ್ತಯ್ಯ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ಧರು. ಸ್ಫೂರ್ತಿಧಾಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕೇಶವ ಕೋಟೇಶ್ವರ ಸ್ವಾಗತಿಸಿ, ವಂದಿಸಿದರು.