Site icon Kundapra.com ಕುಂದಾಪ್ರ ಡಾಟ್ ಕಾಂ

ತಲ್ಲೂರು: ಲಾರಿ ಡಿಕ್ಕಿ, ಸವಾರ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ– 66 ರ ತಲ್ಲೂರು ಜಂಕ್ಷನ್ ಬಳಿ ಬುಧವಾರ ರಾತ್ರಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಸವಾರ ಮೃತಪಟ್ಟಿದ್ದಾರೆ. ಕುಂದಾಪುರದಲ್ಲಿ ವರ್ತಕರಾಗಿರುವ ಸೀತಾರಾಮ್ ಶೆಟ್ಟಿ ಮೃತರು. ಇವರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲ್ಲೂರಿನಲ್ಲಿ ಬೈಂದೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿಹೊಡೆದಿತ್ತು. ‌

ಇದೇ ಸಂದರ್ಭ ಸ್ಕೂಟಿ ಸವಾರ ಮಗುಚಿರುವುದನ್ನು ಕಂಡು ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಇನ್ನೊಂದು ಅಪಘಾತವೂ ಇಲ್ಲಿ ಸಂಭವಿಸಿದೆ. ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Exit mobile version