Site icon Kundapra.com ಕುಂದಾಪ್ರ ಡಾಟ್ ಕಾಂ

ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು

ಕುಂದಾಪುರ: ಮನೆಯ ತೋಟಕ್ಕೆ ಬಂದ ಜಾನುವಾರುಗಳನ್ನುಯ ಅಟ್ಟಿಸಲು ಹೋದ ವಿದ್ಯಾರ್ಥಿ ಯೋರ್ವ ಮನೆ ಸಮೀಪದ ಕೆರೆಗೆ ಬಿದ್ದ ಸಾವಿಗೀಡಾದ ವಿದ್ರಾವಕ ಘಟನೆ ಶೆಟ್ರಕಟ್ಟೆ ಸಮೀಪದ ಮಾವಿನಕೆರೆ ಎಂಬಲ್ಲಿ ಜರಗಿದೆ. ಕೆಂಚನೂರು ವಾಸಿಮುತ್ತಯ್ಯ ದೇವಾಡಿಗ ಹಾಗೂ ಲಲಿತಾ ದಂಪತಿಗಳ ಮಗನಾದ ರಜಿತ್(೧೭) ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುನಲ್ಲಿ ಕಲಿಯುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ತಂದೆ ಬೆಂಗಳೂರಿನಲ್ಲಿ ಹೋಟೇಲ್  ಕಾರ್ಮಿಕನಾಗಿ ದುಡಿಯುತ್ತಿದ್ದು ಈತನಿಗೆ ಓರ್ವ ಸಹೋದರಿಯಿದ್ದಾಳೆ. ಬಡತನವಿದ್ದರೂ ಕಲಿಕೆಯಲ್ಲಿ ಮುಂದಿದ್ದ ರಜಿತ್ ನನ್ನು ಸಾಕಷ್ಟು ಓದಿಸಿಬೇಕೆಂದು ಕೊಂಡಿದ್ದ ಹೆತ್ತವರು  ಅತ್ಯಂತ ಪ್ರೀತಿಯಿಂದ ಯಾವುದಕ್ಕೂ ಕಮ್ಮಿ ಇಲ್ಲದಂತೆ ಸಾಕುತ್ತಿದ್ದರು. ತಂದೆ ಮನೆ ಇರುವ ಕೆಂಚನೂರಿನ ಸಮೀಪದ ಮಾವಿನ ಕೆರೆ ಯಿಂದ ದಿನಾ ಕಾಲೇಜಿಗೆ ಬರುತ್ತಿದ್ದ ರಜಿತ್ ಇಂದು ಭಾನುವಾರ ವಾದ್ದ ಕಾರಣ ಮನೆಯಲ್ಲಿದ್ದ . ಆದರೆ ಕ್ರೂರ ಸಾವು ಜಾನುವಾರುಗಳ ರೂಪದಲ್ಲಿ ಏಂಟ್ರಿ ಕೊಟ್ಟು ಪಕ್ಕದ ಕೆರೆಯ ಬಳಿ ಹೊಂಚಿ ಕೂತಿತ್ತು. ಅಗ್ನಿ ಶಾಮಕ ದಳವೂ ಸ್ಥಳಕ್ಕೆ ಅಗಮಿಸಿ ಸಾಕಷ್ಟು ಹುಡುಕಾಟದ ನಂತರ ರಜಿತ್ ಮೃತ ದೇಹವನ್ನು ಮೇಲಕ್ಕೆ ತರಲಾಗಿತ್ತು.

Exit mobile version