ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಕುಂದಾಪುರ – ಬೈಂದೂರು ತಾಲೂಕು ಹವ್ಯಕ ಸಭಾದಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಗೂರು ಸಂದೀಪನ್ ಸ್ಕೂಲಿನಲ್ಲಿ ವ್ಯಾಸಂಗ ಮಾಡಿ 625 ಕ್ಕೆ620 ಅಂಕ ಗಳಿಸಿ ಕರ್ನಾಟಕ ರಾಜ್ಯಕ್ಕೆ 6 ನೇ ರ‍್ಯಾಂಕ್ ಮತ್ತು ಉಡುಪಿ ಜಿಲ್ಲೆಗೆ 3 ನೇ ರ‍್ಯಾಂಕ್ ಗಳಿಸಿ ವಿಶೇಷ ಸಾಧನೆ ಮಾಡಿದ ಬೈಂದೂರಿನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಮಣ್ಯ ಭಟ್ ಮತ್ತು ಸುಮ ದಂಪತಿಗಳ ಪುತ್ರಿ ಕವನಾ ಭಟ್ ಹಾಗೂ ಶಿಕ್ಷಕ ಮಂಜುನಾಥ ಶಿರೂರು ಮತ್ತು ಶಿಕ್ಷಕಿ ಶಶಿಕಲಾ ದಂಪತಿಗಳ ಪುತ್ರಿ ಮೈತ್ರೇಯಿ ಅವರನ್ನು ಹವ್ಯಕ ಸಭಾದಿಂದ ಬೈಂದೂರಿನಲ್ಲಿ ಸನ್ಮಾನಿಸಲಾಯಿತು
ಹವ್ಯಕ ಸಭಾ ಅಧ್ಯಕ್ಷ ಎನ್ ನಾಗರಾಜ್ ಭಟ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡುತ್ತಾ ರ‍್ಯಾಂಕ ಪಡೆದ ವಿದ್ಯಾರ್ಥಿಗಳ ಸಾಧನೆ ಎಲ್ಲರಿಗೂ ಸಂತಸ ತಂದಿದ್ದು ಗ್ರಾಮಿಣ ಭಾಗದಲ್ಲಿ ಎಲ್ಲಾ ಸೌಕರ್ಯ ಇಲ್ಲದೇಯೂ ಹಾಗೂ ಕೋವಿಡ್ ಮಾಹಾಮಾರಿ ಕಾಯಿಲೆಯ ಆತಂಕದ ನಡುವೆಯು ಅತ್ಯುತ್ತಮ ಸಾಧನೆ ಮಾಡಿದಾರೆಂದು ಹೇಳಿದರು.
ನಿವೃತ್ತ ಉದ್ಯೋಗಿ ಎಸ್.ಎಮ್ ಭಟ್ ಮತ್ತು ರಾಜೇಶ್ವರಿ ದಂಪತಿಗಳು ಆತಿಥ್ಯದ ವ್ಯವಸ್ಥೆ ಮಾಡಿದರು. ಈ ಸಂಧರ್ಭದಲ್ಲಿ ಬೈಂದೂರು ಶೆನೇಶ್ವರ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಾದ್ಯ ಹವ್ಯಕ ಸಭಾ ಪ್ರಧಾನ ಕಾರ್ಯದರ್ಶಿ ಮತ್ತು ಶ್ರೀ ರಾಮಚಂದ್ರಾಪುರಮಠದ ಬೈಂದೂರು ಘಟಕದ ಗುರಿಕಾರ ಯು ಸಂದೇಶ್ ಭಟ್ ಕೋಶಾಧ್ಯಕ್ಷ ಯು ವೆಕಂಟರಮಣ ಭಟ್ ಮತ್ತು ವಿದ್ಯಾರ್ಥಿಗಳ ಪೊಷಕರು ಉಪಸ್ಥಿತರಿದ್ದರು. ಸಂದೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
