Site icon Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರರಿಂದ ಡಾ. ಕಲಾಂಗೆ ಶ್ರದ್ಧಾಂಜಲಿ

ಗಂಗೊಳ್ಳಿ: ರಾಷ್ಟ್ರದ ಪ್ರೇರಣಾ ಶಕ್ತಿಯಾಗಿ, ಯುವಕರಿಗೆ ಸ್ಫೂರ್ತಿಯಾಗಿ, ದೇಶದ ಮುನ್ನಡೆಗೆ ೨೦:೨೦ ಯೋಜನೆ ರೂಪಿಸಿದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರದ್ದು ಮೇರು ವ್ಯಕ್ತಿತ್ವ. ಭಾರತ ರತ್ನ ಪ್ರಶಸ್ತಿ ಪಡೆದು ದೇಶದ ಹೆಮ್ಮಯ ಪುತ್ರನಾಗಿ ಇಡೀ ವಿಶ್ವವೇ ತಲೆಬಾಗುತ್ತಿದ್ದ ಡಾ.ಕಲಾಂ ಅವರು ನಮ್ಮನ್ನಗಲಿರುವುದು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಹೇಳಿದರು.

ಅವರು ಮಂಗಳವಾರ ಗಂಗೊಳ್ಳಿ ಲೈಟ್‌ಹೌಸ್ ಬಳಿಕ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಗಂಗೊಳ್ಳಿ ವಲು ಮಾಟುಬಲೆ ಮೀನುಗಾರರ ಸಭೆಯಲ್ಲಿ ಡಾ.ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನುಡಿ ನಮನ ಸಲ್ಲಿಸಿದರು.

ಗಂಗೊಳ್ಳಿ ವಲಯ ಮಾಟುಬಲೆ ಘಟಕದ ಮಾಲೀಕರು, ಮುಖ್ಯ ಪಾಲುದಾರರು ಮತ್ತು ಮೀನುಗಾರರು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ನಮನ ಸಲ್ಲಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಚೌಕಿ ವಿಠಲ ಖಾರ್ವಿ, ಮಾಜಿ ಅಧ್ಯಕ್ಷರಾದ ವೆಂಕಟೇಶ ಕೋಟಾನ್, ಚಂದ್ರ ಡಿ.ಖಾರ್ವಿ, ಕಂಚುಗೋಡು ಶ್ರೀ ರಾಮ ದೇವಸ್ಥಾನದ ಅಧ್ಯಕಗಷ ಮಡಿ ಶಂಕರ ಖಾರ್ವಿ, ಮಾಜಿ ಕಾರ್ಯದರ್ಶಿ ಸುರೇಶ ಬಿಲ್ಲವ ಕೋಡಿ, ಬಿ.ನಾಗರಾಜ ಖಾರ್ವಿ ಗಂಗೊಳ್ಳಿ, ನಾಗಪ್ಪಯ್ಯ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.

Exit mobile version