Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳಕ್ಕೆ ಪುದುಚೆರಿ ಮುಖ್ಯಮಂತ್ರಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುದುಚೆರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಶುಕ್ರವಾರ ಬೆಳಗ್ಗೆ ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಗುರುವಾರ ರಾತ್ರಿ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿ, ದೇವಸ್ಥಾನ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಗ್ಗೆ 5 ಗಂಟೆಗೆ ಮೂಕಾಂಬಿಕಾ ದೇವಿ ದರ್ಶನ ಪಡೆದ ವಿಶೇಷ ಪೂಜೆ ಸಲ್ಲಿಸಿದ ನಂತರ ಚಂಡಿಕಾ ಹೋಮ ನೆರವೇರಿಸಿ, ಪೂರ್ಣಾಹುತಿ ಸಮರ್ಪಿಸಿದರು.

ಸಿಎಂ ನಾರಾಯಾಣ ಸ್ವಾಮಿ ಅವರ ದೇವಸ್ಥಾನಕ್ಕೆ ಕುಂದಾಪುರ ಎಸಿ ಕೆ.ರಾಜು ಅವರು ಬರಮಾಡಿಕೊಂಡಿದ್ದು, ದೇವಸ್ಥಾನ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತುಗೋಳಿ ದೇವಾಸ್ಥಾನ ಪರವಾಗಿ ಗೌರವಿಸಿದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕ್ಷೇತ್ರದ ಪರವಾಗಿ ಸನ್ಮಾನಿಸಿದರು.

Exit mobile version