Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಕ್ರಮ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶಕ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ನೀರಿಕ್ಷಕರು ಗುರುವಾರ ವಶಪಡಿಸಿಕೊಂಡಿದ್ದು, ಓರ್ವ ಪರಾರಿಯಾಗಿದ್ದಾನೆ.

ಖಚಿತ ಮಾಹಿತಿ ಆಧರಿಸಿ ಕುಂದಾಪುರ ನಗರ ಠಾಣಾ ಪೋಲೀಸರು ಹಾಗೂ ಆಹಾರ ನೀರಿಕ್ಷಕ ಎಚ್. ಎಸ್. ಸುರೇಶ್ ಅವರು ದಾಳಿ ನಡೆಸಿದ್ದು, ತ್ರಾಸಿ ಅಣ್ಣಪ್ಪಯ್ಯ ಸಭಾಭವನದ ಬಳಿ ಹೊಸ ಇಕೋ ವಾಹನದಲ್ಲಿ ಪಡಿತರ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದೆ. ವಾಹನ ಚಾಲಕ ಪರಾರಿಯಾಗಿದ್ದು, ವಾಹನವು ಮೊಹಮ್ಮದ್ ಸಬಿಲ್‌ ಎಂಬಾತನಿಗೆ ಸೇರಿದ್ದು ತಿಳಿದು ಬಂದಿದೆ.

ವಾಹನದಲ್ಲಿ 24 ಅಕ್ಕಿ ತುಂಬಿದ ಚೀಲಗಳಿದ್ದು ಒಟ್ಟು 15,641 ರೂ. ಮೌಲ್ಯದ 1,043 ಕೆಜಿ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version