Site icon Kundapra.com ಕುಂದಾಪ್ರ ಡಾಟ್ ಕಾಂ

ವಡೇರಹೋಬಳಿ : ಇಂಟರ‍್ಯಾಕ್ಟ್ ಪದಪ್ರದಾನ

ಕುಂದಾಪುರ: ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಹಿರಿಯ ರೋಟೆರಿಯನ್ ಎ.ಪಿ..ಮಿತ್ಯಂತಾಯ ಹೇಳಿದರು.

ಅವರು ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ವಡೇರಹೋಬಳಿಯ ಸರೋಜಿನಿ ಮಧುಸೂದನ  ಸರಕಾರಿ ಫ್ರೌಢ ಶಾಲೆಯಲ್ಲಿ 2015-16ನೇ ಸಾಲಿನ ಇಂಟರ‍್ಯಾಕ್ಟ್ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ನೂತನ ಅಧ್ಯಕ್ಷ ಚಂದ್ರಕಾಂತ ಹಾಗೂ ಕಾರ್ಯದರ್ಶಿ ಶಾಲಿನಿ ಅವರಿಗೆ ಪದಪ್ರದಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಇಂಟರ‍್ಯಾಕ್ಟ್ ಛೇರ್‌ಮೆನ್ ವೆಂಕಟೇಶ ಪ್ರಭು, ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಎಚ್. ಮೀರಾ ಸಾಹೇಬ್ ಶುಭಹಾರೈಸಿದರು. ಅಧ್ಯಾಪಕರಾದ ಯು. ಚನ್ನಯ್ಯ, ಮಂಜುನಾಥ ಹೆಬ್ಬಾರ್, ರೋಟರಿ ಕ್ಲಬ್ ಕುಂದಾಪುರ ಪೂರ್ವಾಧ್ಯಕ್ಷ ಮನೋಜ್ ನಾಯರ್, ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ಧರು.

Exit mobile version