ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಾಧ್ಯಾಪಕ ಬಾಲಕೃಷ್ಣ ಎಸ್. ಮದ್ದೋಡಿ ಅವರು ಮಂಡಿಸಿದ “ಭಾರತದ ದಕ್ಷಿಣ ಪಶ್ಚಿಮ ಕರಾವಳಿಯ ಉದ್ಯಾವರ ನದಿ ಜಲಾನಯನ ಪ್ರದೇಶದ ಭೂ – ಮಾಹಿತಿ ಮತ್ತು ಭೂ ಮೌಲ್ಯಮಾಪನ ಅಧ್ಯಯನಗಳು”ಸಂಶೋಧನಾ ಪ್ರಬಂಧಕ್ಕೆ ‘ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯು ಪಿಎಚ್ಡಿ ಪದವಿ ಪ್ರದಾನಿಸಿದೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, ಪ್ರಾಧ್ಯಾಪಕ, ಭೂ ವಿಜ್ಞಾನ ಡಾ. ಎಚ್. ಎನ್. ಉದಯಶಂಕರ ಅವರ ಮಾರ್ಗದರ್ಶನದಡಿಯಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.
ಬೈಂದೂರು ತಾಲೂಕಿನ ಮಯ್ಯಾಡಿಯವರಾದ ಬಾಲಕೃಷ್ಣ ಮದ್ದೋಡಿ ರೋಟರಿ ಜಿಲ್ಲೆ 3182 ಇದರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಉತ್ತಮ ಸಂಘಟಕ, ವಾಗ್ಮಿ, ಸಮಾಜ ಸೇವಕ, ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶ್ರೀನಿವಾಸ ರಾಮಕೃಷ್ಣ ಮದ್ದೋಡಿ ಮತ್ತು ಲೀಲಾವತಿ ಮದ್ದೋಡಿ ಅವರ ಪುತ್ರರಾಗಿದ್ದು ಹಾಗು ಮಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ.

