Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ವತಿಯಿಂದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿನಮನ ಕಾರ್ಯಕ್ರಮ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ನೆಡೆಯಿತು.

ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮಾತನಾಡಿ, ಜಗತ್ತಿನ ಶ್ರೇಷ್ಠ ಗಾಯಕರಾಗಿ, ಯಾರೂ ಮರಿಯಲಾರದ ಸಾಧನೆ ಮಾಡಿ ೫೫ ವರ್ಷಗಳಲ್ಲಿ 40 ಸಾವಿರಕ್ಕಿಂತ ಅಧಿಕ ಹಾಡುಗಳನ್ನು ಹಾಡಿದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಭಾರತಕ್ಕೆ ಸೀಮಿತರಾಗದೇ ಜಗತ್ತಿನೆಲ್ಲೆಡೆ ಗುರುತಿಸಿಕೊಂಡವರು ಎಂದು ಹೇಳಿದರು.

ರೋಟರಿ ಕ್ಲಬ್‌ನ ಡಾ. ರಾಜಾರಾಮ್ ಶೆಟ್ಟಿ ಮಾತನಾಡಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಸೂಯೆ ಇಲ್ಲದ ಸಂಗೀತ ಸಾಮ್ರಾಜ್ಯ ಕಟ್ಟಿಕೊಂಡ ಧೀಮಂತ ಗಾಯಕ. ಆಡಂಭರ ಇಲ್ಲದ ವ್ಯಕ್ತಿತ್ವ, ಪ್ರತಿ ನಟನಿಗೂ ಬೇಕಾದ ಧ್ವನಿ ಕೊಡುವ ವಿಶಿಷ್ಟ ಸ್ವರ ಸಾಮರ್ಥ್ಯ ಹೊಂದಿದ ಅಪರೂಪದ ವ್ಯಕ್ತಿ ಎಂದರು.

ಉದಯ್ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘ ವಕ್ತಾರ ಕೆ. ವಿಕಾಸ ಹೆಗ್ಡೆ, ಮನೋಜ್ ನಾಯರ್ , ಡಿ. ಸತೀಶ್, ರೈಲ್ವೆ ಹೋರಾಟ ಸಮಿತಿಯ ವಿವೇಕ್ ನಾಯಕ್, ನಾಗರಾಜ್, ಪತ್ರಕರ್ತರ ಸಂಗದ ಅಧ್ಯಕಷ ಶಶಿಧರ ಹೆಮ್ಮಾಡಿ, ಪತ್ರಕರ್ತ ಜಾನ್ ಡಿಸೋಜಾ, ಸಹನಾ ಗ್ರೂಪ್ ಆಫ್ ಹೋಟೇಲ್‌ನ ಸುರೇಂದ್ರ ಶೆಟ್ಟಿ, ಚಿತ್ರನಟ ಒಂ ಗಣೇಶ್ ಉಪ್ಪುಂದ ಪುರಸಭೆ ಮಾಜಿ ಅಧ್ಯಕ್ಷೆ ವಸಂತಿ ಸಾರಂಗ, ಮಹಾಕಾಳಿ ದೇವಸ್ಥಾನ ಅಧ್ಯಕ್ಷ ಜಯಾನಂದ ಖಾರ್ವಿ, ಪತ್ರಕರ್ತ ಯು. ಎಸ್. ಶೇಣ್ಯೆ ಉಪಸ್ಥಿತರಿದ್ದರು

ಈ ಸಂದರ್ಭ ಪ್ರಣವ್ ಮುಖರ್ಜಿ, ಸುರೇಶ್ ಅಂಗಡಿ, ಅಶೋಕ್ ಗಸ್ತಿ, ನಾರಾಯಣ ರಾವ್, ಚೇತನ್ ಚೌಹಾಣ್, ಜಸ್ವಂತ್ ಸಿಂಗ್, ಸರೋಜ್ ಖಾನ್, ರಿಷಿ ಕಪೂರ್, ಇರ್ಫಾನ್ ಖಾನ್, ಚಿರಂಜೀವಿ ಸರ್ಜಾ, ವಾಜಿದ್ ಖಾನ್, ಪಂಡಿತ್ ಜಸ್ರಾಜ್, ಯೋಗೇಶ್ ಗೌರ್ ಮೊದಲಾವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Exit mobile version