Site icon Kundapra.com ಕುಂದಾಪ್ರ ಡಾಟ್ ಕಾಂ

ಅರಾಟೆ ಸೇತುವೆ: ಮೂಲ ರಚನೆಯಲ್ಲಿ ದೋಷವಿಲ್ಲ – ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಿಂದ ಕಾರವಾರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆಯನ್ನು ಐ. ಆರ್. ಬಿ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿದ್ದು, ಇದರ ಭಾಗವಾಗಿ ಮುಳ್ಳಿಕಟ್ಟೆ ಆರಾಟೆ ಎಂಬಲ್ಲಿ ಸೇತುವೆಯನ್ನು ಸಹ ನಿರ್ಮಿಸಲಾಗಿದೆ.

ನಿರ್ಮಾಣಗೊಂಡ ಮೂರೇ ವರ್ಷಗಳಲ್ಲಿ ಬೈಂದೂರು – ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 66 ಮುಳ್ಳಿಕಟ್ಟೆ ಆರಾಟೆ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುತ್ತದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ಈ ಬಗ್ಗೆ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದ್ದು ಈ ಬಗ್ಗೆ ಸ್ಥಳ ಪರಿಶೀಲನೆಗೆ ತಾಂತ್ರಿಕ ತಜ್ಞರ ಸಮಿತಿಗೆ ಸೂಚಿಸಲಾಗಿತ್ತು.

ಬಿರುಕು ಕಾಣಿಸಿಕೊಂಡಿರುವುದರ ಬಗ್ಗೆ ತಾಂತ್ರಿಕ ತಜ್ಞರ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದು, ವರದಿಯಂತೆ ಸೇತುವೆ ರಚನೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಸೇತುವೆಯ ಮೇಲ್ಬಾಗದಲ್ಲಿ ಮಾತ್ರ ಬಿರುಕು ಕಂಡು ಬಂದಿದ್ದು, ಸ್ವಾನ್ ಜಾಯಿಂಟ್ ನಲ್ಲಿ ಕಂಡು ಬಂದಿರುವುದರಿಂದ ಅಪಾಯವಿಲ್ಲ ಹಾಗೂ ಸೇತುವೆ ಮೂಲ ರಚನೆಯಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿದುಬಂದಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version