Site icon Kundapra.com ಕುಂದಾಪ್ರ ಡಾಟ್ ಕಾಂ

ಉತ್ತಮ ನಡೆಯುಳ್ಳ ಗುರುಗಳು ಈ ಸಮಾಜದ ನಿಜವಾದ ಆಸ್ತಿ: ಡಾ. ಕಾಶಿನಾಥ್ ಪೈ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ  ಕನ್ನಡ ಮಾಧ್ಯಮದ ಪ್ರೌಢಶಾಲೆಯ ಶಾಲೆಯಲ್ಲಿ 22 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಂಸ್ಕೃತ ಅಧ್ಯಾಪಕ ಶಂಕರನಾರಾಯಣ ಭಟ್ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು

ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದ,  ಜಿ. ಎಸ್. ವಿ.  ಎಸ್  ಅಸೋಸಿಯೇಷನ್ನಿನ ಅಧ್ಯಕ್ಷ ಡಾ. ಕಾಶಿನಾಥ್ ಪೈ ಗಂಗೊಳ್ಳಿ – ವಿದ್ಯಾರ್ಥಿಗಳ ಬಹುಮುಖ ಯಶಸ್ಸಿನ ಸಾಧನೆಗಳ ಹಾದಿಯಲ್ಲಿ ಅಧ್ಯಾಪನ ವೃತ್ತಿಯ ಯಶಸ್ಸು ಇರುತ್ತದೆ. ಉತ್ತಮ ನಡೆಯುಳ್ಳ ಗುರುಗಳು ಈ ಸಮಾಜದ ನಿಜವಾದ ಆಸ್ತಿ ಎಂದು ಅಭಿಪ್ರಾಯಪಟ್ಟರು

ಜಿ ಎಸ್. ವಿ. ಎಸ್ ಅಸೋಸಿಯೇಷನ್ನಿನ ಕಾರ್ಯದರ್ಶಿ, ಎಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯ ಸಂಸ್ಥೆಗಳ ಕಾರ್ಯದರ್ಶಿ ಎನ್. ಸದಾಶಿವ ನಾಯಕ್, ಉಪನ್ಯಾಸಕರಾದ ಹೆಚ್. ಭಾಸ್ಕರ್ ಶೆಟ್ಟಿ, ನರೇಂದ್ರ ಎಸ್ ಗಂಗೊಳ್ಳಿ, ಕಚೇರಿ ಸಿಬ್ಬಂದಿ ಶ್ರೀಧರ ಗಾಣಿಗ ಅವರು ಶಂಕರನಾರಾಯಣ ಭಟ್ ಅವರನ್ನು ಅಭಿನಂದಿಸಿದರು

ಶಂಕರನಾರಾಯಣ ಭಟ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ,  ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕ ಗೋಪಾಲ ದೇವಾಡಿಗ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಆದಿನಾಥ್ ಕಿಣಿ ನಿರೂಪಿಸಿದರು. ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಉಮೇಶ್ ಕರ್ಣಿಕ್ ವಂದಿಸಿದರು

Exit mobile version