Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಾದ್ಯಂತ ವಿಧ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕ. ವಿ. ಪ್ರ. ನಿ. ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಓಕ್ಕೂಟ ಬೆಂಗಳೂರು ಇದರ ಕರೆಯ ಮೇರೆಗೆ ಕುಂದಾಪುರ ಸ್ಥಳೀಯ ಸಮಿತಿ ಹಾಗೂ ಇತರ ಒಕ್ಕೂಟಗಳ ನೇತೃತ್ವದಲ್ಲಿ ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನೆಡೆಸಿದರು.

ಉಡುಪಿ ವೃತ್ತದ ನೌಕರ ಸಂಘದ ಸಂಘಟನಾ ಕಾರ್ಯದರ್ಶಿ ಬಾಬಣ್ಣ ಪೂಜಾರಿಯವರು ಮಾತನಾಡಿ, ಕಂಪನಿಗಳ ಖಾಸಗೀಕರಣದಿಂದ ನೌಕರರಿಗೆ ನೌಕರರಿಗೆ ಹಾಗೂ ಜನಸಾಮಾನ್ಯರಿಗೆ ಮುಖ್ಯವಾಗಿ ಕೃಷಿಕರಿಗೆ ಯಾವುದೇ ಲಾಭವಿಲ್ಲ ಬದಲಾಗಿ ಹೆಚ್ಚಿನ ಹೊರೆ ಅನುಭವಿಸಬೇಕಾಗುತ್ತದೆ ಎಂದರು.

ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಕೇಶ್ ಅವರು ಮಾತನಾಡಿ ಕಂಪನಿಯನ್ನು ಉಳಿಸಿಕೊಳ್ಳಬೇಕಾದರೆ ನೌಕರರ ಶ್ರಮ ಹಾಗೂ ಒಗ್ಗಟ್ಟು ಅತ್ಯಗತ್ಯ ಎಂದು ನುಡಿದರು .

ಸ್ಥಳೀಯ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಎಂ. ರವರು ಮಾತನಾಡಿ ಖಾಸಗೀಕರಣದಿಂದ ಈವರೆಗೂ ಗ್ರಾಹಕರಿಗೆ ದೊರೆಯುತ್ತಿದ್ದ ಸಬ್ಸಿಡಿಗಳು ದೊರೆಯುವುದಿಲ್ಲ ಹಾಗೂ ಒನ್ ನೇಷನ್ ಒನ್ ಟ್ಯಾರಿಫ್ ನಡಿಯಲ್ಲಿ ಎಲ್ಲ ಗ್ರಾಹಕರಿಗೂ ವಿದ್ಯುತ್ ದರಗಳು ಹೆಚ್ಚಿಗೆ ಆಗುವುದರಲ್ಲಿ ಸಂದೇಹವಿಲ್ಲ ,ಕೃಷಿಗೆ ಸಿಗುತ್ತಿದ್ದ ವಿದ್ಯುತ್ ಸಬ್ಸಿಡಿಯೂ ಸಹ ದೊರೆಯುವುದಿಲ್ಲ ಇದರಿಂದ ಜನಸಾಮಾನ್ಯರಿಗೆ ಹೊರೆ ಯಾಗುವುದು ಖಂಡಿತ ಎಂದು ನುಡಿದರು . ಇದೇ ದಿನ ವಿಭಾಗದ ಎಲ್ಲ ಶಾಖಾ ಕಚೇರಿಗಳಲ್ಲಿ ನೌಕರರು ಕಪ್ಪುಪಟ್ಟಿ ಧರಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು .

ತಲ್ಲೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀವಿನಾಯಕ ಕಾಮತ್, ಕುಂದಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ, ಶಂಕರನಾರಾಯಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ, ವಿಭಾಗದ ಲೆಕ್ಕಾಧಿಕಾರಿಗಳಾದ ಅಣ್ಣಯ್ಯ ಶೆಟ್ಟಿಗಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಅಭಿಲಾಷ್ ಬಿ. ಎ ವಿಭಾಗದ ಇನ್ನಿತರ ಅಧಿಕಾರಿ ವರ್ಗದವರು ಶಾಖಾಧಿಕಾರಿಗಳು ನೌಕರರು ಉಪಸ್ಥಿತರಿದ್ದರು .

Exit mobile version