Site icon Kundapra.com ಕುಂದಾಪ್ರ ಡಾಟ್ ಕಾಂ

ನಕ್ಸಲ್ ನಂದ್‌ಕುಮಾರ್ ಕುಂದಾಪುರ ನ್ಯಾಯಾಲಯಕ್ಕೆ ಹಾಜರು

ಕುಂದಾಪುರ: ನಕ್ಸಲ್ ನಂದಕುಮಾರ್ ಯಾನೆ ರಂಗನಾಥ್ ಯಾನೆ ಸುನಿಲ್ ಅವರನ್ನು ಶುಕ್ರವಾರ ಸಾಕ್ಷಿ ವಿಚಾರಣೆಗಾಗಿ ಕುಂದಾಪುರ ನ್ಯಾಯಾಲಯಕ್ಕೆ ಬಿಗಿಭದ್ರತೆಯಲ್ಲಿ ಹಾಜರುಪಡಿಸಲಾಯಿತು. ಶಿವಮೊಗ್ಗದಲ್ಲಿ ಬಂಧಿಸಲ್ಪಟ್ಟಿದ್ದ ಈತ ಮೂಲತಃ ಚಿಕ್ಕಮಗಳೂರು ತಾಲೂಕಿನ ನಿವಾಸಿಯಾಗಿದ್ದು ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಳ್ಳಿಹೊಳೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಪ್ರಸ್ತುತ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾನೆ. ಸಾಕ್ಷಿ ವಿಚಾರಣೆ ಸಂದರ್ಭ ಎಡಿಜಿಪಿ ರಾಘವೇಂದ್ರ ಔರಾದ್‌ಕರ್, ನಿವತ್ತ ಡಿವೈಎಸ್ಪಿ ವಿಶ್ವನಾಥ್ ಪಂಡಿತ್, ಹುಬ್ಬಳ್ಳಿ ಡಿವೈಎಸ್ಪಿ ಯಶೋಧಾ ಒಂಟಗೋಡಿ ಇದ್ದರು.

Exit mobile version