Site icon Kundapra.com ಕುಂದಾಪ್ರ ಡಾಟ್ ಕಾಂ

ಸಂಕಷ್ಟದಲ್ಲಿ ರಕ್ತದಾನಿ: ಚಿಕಿತ್ಸೆಗೆ ನೆರವಾಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಿದ್ಕಲ್ ಕಟ್ಟೆ ನಿವಾಸಿ ಶಾಂತಾರಾಮ ಮೋಗವೀರ  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಕುಟುಂಬ ಸಂಕಷ್ಟಕ್ಕೀಡಾಗಿದೆ.

ಸಮಾಜಸೇವೆ ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದ ಅವರಿಂದು ಹಾಸಿಗೆ ಹಿಡಿದಿದ್ದಾರೆ. ಈವರೆಗೆ 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಹಲವರಿಗೆ ಜೀವದಾನ ಮಾಡಿದವರು. ದೈನಂದಿನ ದುಡಿಮೆಯ ಮೂಲಕ ಪತ್ನಿ ಪುತ್ರಿ ಹಾಗೂ ತಾಯಿಯನ್ನೊಳಗೊಂಡ ಸಂಸಾರದ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದ ಇವರೀಗ ತನಗಿರುವ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲಾಗದ ಕಷ್ಟ ಎದುರಿಸುತ್ತಿದ್ದಾರೆ. ಕಿಡ್ನಿ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ವಾರದಲ್ಲಿ 2 ಬಾರಿ ಡಯಾಲಿಸ್ ಮಾಡಬೇಕಾದೆ. ಅದಕ್ಕಾಗಿ ಸಾವಿರಾರು ರೂ. ವ್ಯಯಿಸಬೇಕಾಗಿದೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತುರ್ತು ಕಿಡ್ನಿ ರಿಪ್ಲೇಸ್ಮೆಂಟ್‌ಗೆ ಶಿಪಾರಸು ಮಾಡಿಸಿದ್ದು ಅದಕ್ಕಾಗಿ 17 ಲಕ್ಷ ರೂ. ಬೇಕಾಗಬಹುದು ಎಂದು ತಿಳಿಸಿದ್ದಾರೆ.

ದಿನದ ದುಡಿಮೆಯಿಂದ ಬದುಕುತ್ತಿರುವ ಇವರ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ಆರ್ಥಿಕ ತೊಂದರೆ ಎದುರಾಗಿದ್ದು ಸಹೃದಯರ ನೆರವಿನ ಆಪೇಕ್ಷಿಸಿದ್ದಾರೆ ದುಡಿಯುವ ವ್ಯಕ್ತಿ ಹಾಸಿಗೆ ಹಾಸಿಗೆ ಹಿಡಿದಿದ್ದರಿಂದ ಬಡ ಕುಟುಂಬ ಒಂದೊತ್ತಿನ ಊಟಕ್ಕೂ ತಾಪತ್ರಯ ಎದುರಿಸುತ್ತಿದೆ ಸಹಕಾರ ನೀಡಬಯಸುವ ಸಹೃದಯರು ಸಿಂಡಿಕೇಟ್ ಬ್ಯಾಂಕ್ ಬಿದ್ಕ್ಕಲ್‌ಕಟ್ಟೆ ಶಾಖೆ ಉಳಿತಾಯ ನಂಬ್ರ 01622250002856 ( ಕಸ್ಷಮರ್ ಐಡಿ – 44364814) ನೆರವು ಸಲ್ಲಿಸಬಹುದು. ಮೊಬೈಲ್ ನಂಬ್ರ 9743985894.

Exit mobile version