Site icon Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಕಿ ಅಡ್ಡಗಟ್ಟಿ ಮಾನಭಂಗ ಯತ್ನ: ಆರೋಪಿ ಬಂಧನ

ಕುಂದಾಪುರ: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯನ್ನು ವ್ಯಕ್ತಿಯೊಬ್ಬ ತಡೆಗಟ್ಟಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಸಿದ್ಧಾಪುರ ಪೇಟೆಯಲ್ಲಿ ನಡೆದಿದೆ. ಉಳ್ಳೂರು 74 ನೇ ಗ್ರಾಮದ ತೆಂಕೂರು ನಿವಾಸಿ ಉಮೇಶ ಭೋವಿ (26) ಎಂಬಾತನೇ ಈ ಕೃತ್ಯ ಎಸಗಿದವನಾಗಿದ್ದು, ಶಿಕ್ಷಕಿ ದೂರಿನ ಮೇರೆಗೆ ಶಂಕರನಾರಾಯಣ ಎಸ್‌ಐ ದೇಜಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳ, ಮಾನಭಂಗ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಆ. 12 ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Exit mobile version