Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಯಕರ್ತರ ಶ್ರಮದಿಂದ ವಿಸ್ತಾರವಾಗಿ ಬೆಳೆದಿರುವ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಮೇಲೆ ಕೆಳಗೆ ಎನ್ನುವ ಭೇದಭಾವ ವಿಲ್ಲ ಎಲ್ಲರಿಗೂ ಸಮಾನ ಅವಕಾಶ ಗಳಿರುದರಿಂದಲೇ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಶಾಸಕನಾಗಿದ್ದೆನೆ ಎಂದು ಮೂಲ್ಕಿ ಪಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಇಲ್ಲಿಗೆ ಸಮೀಪದ ಕೋಟೇಶ್ವರದಲ್ಲಿ ಮಂಗಳವಾರ ಕುಂದಾಪುರ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದೆ ಕುಟುಂಬ ರಾಜಕಾರಣ ಬೆಂಬಲ ಇಲ್ಲಲದ ವ್ಯಕ್ತಿಗಳು ದೇಶದ ಪ್ರಧಾನಿ ಹಾಗೂ ರಾಷ್ಟ್ರಾಧ್ಯಕ್ಷರ ಸ್ಥಾನವನ್ನು ಅಲಂಕರಿಸಲು ಬಿಜೆಪಿಯಲ್ಲಿ ಮಾತ್ರ ಸಾಧ್ಯವಾಗುತ್ತದೆ ಪಕ್ಷ ವಿಶ್ವಾಸ ಇರಿಸಿ ನೀಡಿರುವ ಜವಾಬ್ದಾರಿಗಳಿಗೆ ಚ್ಯುತಿ ಬಾರದೆ ಇರುವಂತೆ ಹುದ್ದೆಯ ನಿರ್ವಹಣೆ ಮಾಡಬೇಕಾದ ಅಗತ್ಯತೆ ಇದೆ ಎಂದರು ಕುಂದಾಪುರ ಕ್ಷೇತ್ರ ಬಿಜೆಪಿ ಮಣಡಲದ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು ಮಂಗಳೂರು ಪ್ರಭಾರಿ ಗೋಪಾಲಕೃಷ್ಣ ಹೇರ್ಳೆ ಆತ್ಮ ನಿರ್ಭರ ಭಾರತ ಕುರಿತು ಮಾಹಿತಿ ನೀಡಿದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ. ಕಿರಣ್‌ಕುಮಾರ ಕೊಡ್ಗಿ, ಕುಂದಾಪುರ ಮಂಡಲ ಪ್ರಭಾರಿ ಬಾಲಚಂದ್ರ ಭಟ್, ಮಂಡಲದ ನಿಕಟ ಪೂರ್ವ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಸುಪ್ರೀತಾ ಕುಲಾಲ್, ಬ್ರಹ್ಮಾವರ ತಾಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ. ಪ್ರಮಖರಾದ ಬಾರ್ಕೂರು ಶಾಂತರಾಮ ಶೆಟ್ಟಿ, ಸದಾನಂದ ಬಲ್ಕೂರು, ಗೋಪಾಲ ಕಳಂಜೆ, ವಿನೋದ ಪೂಜಾರಿ, ಸುನೀಲ್ ಶೆಟ್ಟಿ ಹೇರಿಕುದ್ರು, ಸುರೇದ್ರ ಕಾಂಚನ್, ಶ್ರೀದರ್ ಮೊಗವೀರ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ ಇದ್ದರು.

Exit mobile version