Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ‘ಫಿಶ್ ಮಾರ್ಕೆಟ್’ ಆ್ಯಪ್ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಓಶಿಯನ್ ವರ್ಲ್ಡ್ ಎಂಟರ್ಪ್ರೈಸಸ್ ಆಶ್ರಯದಲ್ಲಿ ನೂತನ ಆನ್ಲೈನ್ ‘ಫಿಶ್ ಮಾರ್ಕೆಟ್ ಆ್ಯಪ್’ ಲೋಕಾರ್ಪಣಾ ಸಮಾರಂಭ ನಡೆಯಿತು.

ತಾಜಾ ಮೀನಿಗೆ ಆನ್‌ಲೈನ್ ಮೂಲಕ ಮಾರುಕಟ್ಟೆ ಒದಗಿಸಲು ಕರಾವಳಿ ಪ್ರದೇಶಲ್ಲಿಯೇ ವಿನೂತನ ಪ್ರಯೋಗಕ್ಕೆ ಯುವಕರು ಹೆಜ್ಜೆ ಇರಿಸಿದ್ದು, ‘ಫಿಶ್ ಮಾರ್ಕೆಟ್ ಆ್ಯಪ್’ಗೆ ಚಾಲನೆ ನೀಡಲಾಯಿತು

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಜಾಲತಾಣವನ್ನು ಸದ್ಭಳಕೆ ಮಾಡುವ ಮೂಲಕ ಸ್ವಉದ್ಯೋಗ ಸೃಷ್ಟಿಮಾಡಬಹುದೆಂಬ ಪ್ರಯೋಗಕ್ಕೆ ಇವರು ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯನಂದ ಖಾರ್ವಿ, ‘ಮತ್ಸ್ಯಪ್ರಿಯರಿಗೆ ಅವರ ಆಯ್ಕೆಯ ಮೀನುಗಳನ್ನು ಆ್ಯಪ್ ಮೂಲಕ ಮನೆಗೆ ತಲುಪಿಸುವ ಯುವಕರ ಪ್ರಯತ್ನ ಶ್ಲಾಘನೀಯ’ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್, ಪುರಸಭಾ ಸದಸ್ಯ ಶೇಖರ ಪೂಜಾರಿ, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಾನ್ಸನ್ ಡಿ ಆಲ್ಮೇಡಾ, ಕಂಡ್ಲೂರು ಜಾಮೀಯ ಮಸೀದಿ ಅಧ್ಯಕ್ಷ ದಸ್ತಗೀರ್ ಸಾಹೇಬ್, ಪ್ರಮುಖರಾದ ಶ್ರೀಧರ್ ಪೂಜಾರಿ, ಆನಂದ ಎಲ್.ಖಾರ್ವಿ, ಸುಧಾಕರ ಖಾರ್ವಿ, ಹೂವಯ್ಯ ಖಾರ್ವಿ, ಅನಿಲ್ ಖಾರ್ವಿ ಸಂಜಯ ಖಾರ್ವಿ, ಸುಧೀರ್ ಹೆಗ್ಡೆ, ಗಣೇಶ್ ಎಚ್. ಖಾರ್ವಿ, ಪ್ರವೀಣ್ ಖಾರ್ವಿ, ಗೌತಮ್ ಖಾರ್ವಿ ಇದ್ದರು.

Exit mobile version