ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಝೀ ಕನ್ನಡ ಕುಟುಂಬದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಕುಂದಾಪುರದ ಸಂತೋಷ್ ಖಾರ್ವಿ ಅವರಿಗೆ ಲಭಿಸಿದೆ.
ಕುಂದಾಪುರದ ಖಾರ್ವಿಕೇರಿಯವರಾದ ಸಂತೋಷ್ ಖಾರ್ವಿ ಅವರು, ಕುಂದಾಪುರದ ಸೈಂಟ್ ಮೇರಿಸ್ ಹೈಸ್ಕೂಲಿನಲ್ಲಿ ಶಿಕ್ಷಣ ಪೂರೈಸಿ ಬದುಕಿನ ಬುತ್ತಿ ಅರಸಿ ಬೆಂಗಳೂರಿಗೆ ತೆರಳಿದರು.
ಕಾದಂಬರಿ ಧಾರವಾಹಿ ಮೂಲಕ ಛಾಯಾಗ್ರಾಹಕರಾಗಿ ಕಿರುತೆರೆ ಪ್ರವೇಶಿಸಿ, ಸಪ್ತಪದಿ, ಅಶ್ವಿನಿ ನಕ್ಷತ್ರ, ಅಮ್ಮ, ಇವಳೇ ವೀಣಾ ಪಾಣಿ ಸೇರಿದಂತೆ 12ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಪ್ರಸ್ತುತ ಮಡದಿ ಶ್ರೀಲಕ್ಷ್ಮೀ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.