Site icon Kundapra.com ಕುಂದಾಪ್ರ ಡಾಟ್ ಕಾಂ

ನಿಶ್ಚಿತಾರ್ಥವಾಗಿ, ಮದುವೆ ನಿಂತು ಹೋದದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮದುವೆ ನಿಂತು ಹೋದ ಕಾರಣಕ್ಕೆ ಮನನೊಂದು ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗ್ರಾಮದಲ್ಲಿ ನಡೆದಿದೆ. ನಾಡ ಗುಡ್ಡೆಯಂಗಡಿ ನಿವಾಸಿ ಮುರಳೀಧರ ನಾಯಕ್ ಅವರ ಪುತ್ರಿ ಸ್ಫೂರ್ತಿ ಎಂ. ನಾಯಕ್ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಆಗಸ್ಟ್ 16 ರಂದು ಉಡುಪಿಯ ಯುವಕನೊಂದಿಗೆ ಸ್ಪೂರ್ತಿಯ ಮದುವೆ ನಿಶ್ಚಿತಾರ್ಥ ಮಾಡಿದ್ದು, ಬಳಿಕ ಕಾರಣಾಂತರಗಳಿಂದ ಈ ಮದುವೆ ನಿಂತು ಹೋಗಿತ್ತು. ಇದೇ ವಿಚಾರದಲ್ಲಿ ಸ್ಫೂರ್ತಿ ಬಹಳಷ್ಟು ನೊಂದುಕೊಂಡಿದ್ದಳು.

ನ.6 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version