Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಮೀಪದ ತೆಕ್ಕಟ್ಟೆ ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣದ ಬಳಿ ಉಡುಪಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಹತ್ತು ಚಕ್ರದ ಲಾರಿಯೊಂದು ಮುಂದೆ ಸಂಚರಿಸುತ್ತಿದ್ದ ಬೈಕ್‌ ಗೆ ಢಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ರಾತ್ರಿ ವೇಳೆ ನಡೆದಿದೆ. ತೆಕ್ಕಟ್ಟೆಯ ನಿಶಾಲ್‌ ಹೇರ್‌ಡ್ರೆಸ್‌ನ ಮಾಲಕ ರೂಪೇಶ್‌ ಭಂಡಾರಿ (25) ಮೃತ ದುರ್ದೈವಿ.

ರೂಪೇಶ್ ಭಂಡಾರಿ ತೆಕ್ಕಟ್ಟೆಯಿಂದ ಮನೆಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಲಾರಿ, ಬೈಕ್‌ ಮತ್ತು ಸವಾರನನ್ನು ಸುಮಾರು ನೂರು ಮೀಟರ್‌ ದೂರಕೆ ಎಳೆದೊಯ್ದಿತ್ತು. ಈ ವೇಳೆ ಬೈಕ್‌ ಸವಾರ ಲಾರಿಯ ಅಡಿಯಲ್ಲಿ ಸಿಲುಕ್ಕಿದ್ದು, ಅವರನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.  ತೆಕ್ಕಟ್ಟೆ ಫ್ರೆಂಡ್ಸ್‌ ಆ್ಯಂಬುಲೆನ್ಸ್‌ ಮೂಲಕ ಗಂಭೀರ ಗಾಯಗೊಂಡ ಬೈಕ್‌ ಸವಾರ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version