Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಕಡಲ ಕಿನಾರೆ ಸ್ವಚ್ಛತೆಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಸರ್ಕಾರದ ಪರಿಸರ ನಿರ್ವಹಣೆ ಮತ್ತು ನೀತಿಯ ಸಂಶೋಧನಾ ಸಂಸ್ಥೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅನುದಾನದ ಮೂಲಕ ದತ್ತು ಪಡೆದು ಇಲ್ಲಿನ ಸಮೀಪದ ಕೋಡಿ ಕಡಲ ಕಿನಾರೆಯ ಸೀವಾಕ್ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪರಿಸರ ವಿಭಾಗದ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರಾದೇಶಿಕ ನಿರ್ದೇಶಕ, ಅರಣ್ಯ ಇಲಾಖೆ ಡಿಸಿಎಫ್ ಡಾ.ದಿನೇಶ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸತ್ಯಶ್ರೀ ಗೌತಮ್, ‘ಕಳೆದ ವರ್ಷ ಎರಡು ಜಿಲ್ಲೆಗಳ 6 ಸಮುದ್ರ ಕಿನಾರೆಗಳಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಕೋಡಿ ಕಿನಾರೆಯಲ್ಲಿ ಸ್ಚಚ್ಛತಾ ಕಾರ್ಯ ಆರಂಭಿಸಲಾಗಿದೆ. ಮಾರ್ಚ್ 31ರವರಿಗೆ ನಿತ್ಯವೂ ಸ್ವಚ್ಛತೆ ನಡೆಯಲಿದೆ ಎಂದು ತಿಳಿಸಿದರು.

ಕೋಡಿ ಸೀವಾಕ್ ಸಮೀಪದ ಅರಣ್ಯ ಇಲಾಖೆ ಜಾಗದಲ್ಲಿ ‘ಬೀಚ್ ಇಕೋ ಪಾರ್ಕ್’ ಹಾಗೂ ’ಟ್ರೀ ಪಾರ್ಕ್’ ನಿರ್ಮಾಣವಾಗಲಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

ಅರಣ್ಯ ಇಲಾಖೆ ಕುಂದಾಪುರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಆಶಿಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಡುಪಿ ಸಿಆರ್‌ಜೆಡ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕಿ ಸಾವಿತ್ರಿ ಖಾದ್ರಿ, ಧೀರಜ್, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಪರಸಭೆ ಸದಸ್ಯರಾದ ಕಮಲಾ ಮಂಜುನಾಥ್, ಲಕ್ಷ್ಮೀಬಾಯಿ, ಪುರಸಭೆ ಮಾಜಿ ಅಧ್ಯಕ್ಷೆ ಪಿ.ಗುಣರತ್ನಾ ಗೋಪಾಡಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ರೆಡ್‌ಕ್ರಾಸ್ ಸಂಸ್ಥೆಯ ಶಿವರಾಮ ಶೆಟ್ಟಿ, ಕಲ್ಪನಾ ಭಾಸ್ಕರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ಭರತ್ ಬಂಗೇರ, ಗಣೇಶ್ ಪುತ್ರನ್, ಲೋಹಿತ್ ಬಂಗೇರ, ಮಾಲತಿ ಬಂಗೇರ, ಅನಿಕೇತ್ ಶೆಣೈ, ಚಂದ್ರಿಕಾ ಚಂದ್ರಮೋಹನ್, ಸತ್ಯನಾರಾಯಣ ಮಂಜ, ಆದಿತ್ಯ ನಾವಡ, ವೈಭವ್, ಆಶಾ ಶೆಟ್ಟಿ, ಅನುದೀಪ್ ಹೆಗ್ಡೆ, ನಿರೀಕ್ಷಿತ್ ಇದ್ದರು.

Exit mobile version