ಕುಂದಾಪುರ: ಬೆಂಗಳೂರಿನ ಅಡಿಗಾಸ್ ಯಾತ್ರಾ ಇದರ ವ್ಯವಸ್ಥಾಪಕ ನಿರ್ದೇಶಕರಾದ ನಾಗರಾಜ ಅಡಿಗ ಮತ್ತು ಅವರ ಪತ್ನಿ ಆಶಾ ನಾಗರಾಜ ಅವರು ಹೆಮ್ಮಾಡಿ ಜನತಾ ಪ.ಪೂ ಕಾಲೇಜಿಗೆ ಉಚಿತ ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ.
ಜನತಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಬಿ.ಮೋಹನ ದಾಸ್ ಶೆಟ್ಟಿ ಅವರು ದಾನಿಗಳಾದ ನಾಗಾರಾಜ ಅಡಿಗ ಮತ್ತು ಆಶಾ ದಂಪತಿ ಅವರನ್ನು ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ, ಗೀತಾ ಜೋಷಿ, ಮಂಜುನಾಥ.ಕೆ.ಎಸ್, ಮಂಜುನಾಥ ಚಂದನ್, ಜೆಸ್ಸಿಡಿಸಿಲ್ವ, ಶ್ರೀಲತಾ.ಕೆ ಉಪಸ್ಥಿತರಿದ್ದರು.

