ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲ ಕಂಬಳ ಬೈಂದೂರು ತಾಲೂರು ಕೊಡೇರಿ ಗ್ರಾಮದ ಪಟೇಲರ ಮನೆ ಕಂಬಳಗದ್ದೆಯಲ್ಲಿ ಜರುಗಿತು. ಏಕಲವ್ಯ ಕಂಬಳ ಸಮಿತಿಯು ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದೊಂದಿಗೆ ಶನಿವಾರ ವೈಭವದ ಕಂಬಳೋತ್ಸವ ಆಯೋಜಿಸಿತ್ತು. ೫೦ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದರು.
ಕಳೆದ ಹಲವಾರು ವರ್ಷಗಳಿಂದ ಪಟೇಲರ ಮನೆಯವರು ಈ ಕಂಬಳೋತ್ಸವನ್ನು ನಡೆಸಿಕೊಂಡು ಬಂದಿದ್ದು, ಕಾರಣಾಂತರಗಳಿಂದ ಈ ಆಚರಣೆ ನಿಂತುಹೋಗಿತ್ತು. ಇದನ್ನು ಮನಗಂಡ ಈ ಭಾಗದ ಕೆಲವು ಯುವಕರು ಸೇರಿಕೊಂಡು ಏಕಲವ್ಯ ಸಮಿತಿ ರಚಿಸಿಕೊಂಡು ಕಂಬಳವನ್ನು ಮುನ್ನೆಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿ ಆಯ್ಕೆಯಾದ ಸಸಿಹಿತ್ಲು ವೆಂಕಟ ಪೂಜಾರಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಪ್‌ಕಾಮ್ಸ್‌ನ ನಿರ್ದೇಶಕ ಚೆನ್ನಕೇಶವ ಕಾರಂತ್ ಇವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಕಂಬಳ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಭಟ್, ಶಿಕ್ಷಕ ಸತ್ಯನಾ ಕೊಡೇರಿ, ಪಟೇಲರ ಮನೆಯ ಸದಸ್ಯರು ಇದ್ದರು.
ಕಂಬಳ ಫಲಿತಾಂಶ:
- ಹಗ್ಗ ಕಿರಿಯ ಬಿಭಾಗ
ಪ್ರಥಮ: ಶೀನ ಪೂಜಾರಿ ಕೋಟಿ-ಚನ್ನಯ ಕುದ್ರು ನಾವುಂದ,
ದ್ವೀತೀಯ: ಎಚ್. ಎನ್. ನಿವಾಸ್ ಭಟ್ಕಳ - ಹಗ್ಗ ಹಿರಿಯ ವಿಭಾಗ:
ಪ್ರಥಮ: ಸಸಿಹಿತ್ಲು ವೆಂಕಟ ಪೂಜಾರಿ
ದ್ವಿತೀಯ ಶ್ರೇಯಸ್ ನಾರಾಯಣ ದೇವಾಡಿಗ - ಹಲಗೆ ವಿಭಾಗ
ಪ್ರಥಮ: ಪನ್ನಗ ಹೆಬ್ಬಾರ್ ಭಟ್ಕಳ
ದ್ವಿತೀಯ: ಸ್ವಾಮಿ ಕೊಡ್ಲಾಡಿ
ಕಂಬಳಕ್ಕೆ ಪೂಜೆ, ಪುನಸ್ಕಾರ ಹಾಗೂ ದೈವಾರಾಧನೆ ಸೇರಿದಂತೆ ಹಲವು ಧಾರ್ಮಿಕ ನಂಟಿರುವುದರಿಂದ ಹಿಂದಿನ ಪರಂಪರೆ, ಪದ್ಧತಿಯಂತೆ ಕಂಬಳಗಳನ್ನು ನಿಲ್ಲಿಸುವುದು ಕಷ್ಟಸಾಧ್ಯ. ಸಾಂಪ್ರದಾಯಿಕವಾಗಿ ಈ ಆಚರಣೆ ಮಾಡಲೇಬೇಕಾದ ಅನಿವಾರ್ಯತೆ ಇರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕೊವಿಡ್ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಂಡು ಕಂಬಳೋತ್ಸವ ಆಚರಿಸಲಾಗಿದೆ.– ವೆಂಕಟ ಪೂಜಾರಿ ಸಸಿಹಿತ್ಲು, ಅಧ್ಯಕ್ಷರು ಕಂಬಳ ಸಮಿತಿ ಬೈಂದೂರು ತಾಲೂಕು