ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಿನಾದ ಸಂಸ್ಥೆಯ ವತಿಯಿಂದ ಗುಜ್ಜಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿಯ ಗೋಮಂದಿರದಲ್ಲಿ ಗೋಪೂಜೆ ಕಾರ್ಯಕ್ರಮ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು.
ನಿನಾದ ಸಂಸ್ಥೆಯ ಅಧ್ಯಕ್ಷ ಎಂ. ಮುಕುಂದ ಪೈ, ಎನ್.ಗಜಾನನ ನಾಯಕ್, ಜಿ.ರೋಹಿದಾಸ ನಾಯಕ್, ಕೆ.ಕೃಷ್ಣ ಭಟ್, ರಾಮನಾಥ ಚಿತ್ತಾಲ್, ಗಣಪತಿ ನಾಯಕ್, ಜಿ.ಗಂಗಾಧರ ಪೈ, ನಿನಾದ ಸಂಸ್ಥೆಯ ಸದಸ್ಯರು, ಪದಾಧಿಕಾರಿಳು, ಗೋಮಂದಿರ ವಿಶೇಷ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.