ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸ್ತಕ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಮಂಗಳೂರು ವಿಭಾಗದಿಂದ ವಿದ್ಯಾರ್ಥಿ ರಿಯಾಯಿತಿ ದರದ ಬಸ್ಸ್‍ಪಾಸು, ವಿಕಲಚೇತನರ ರಿಯಾಯಿತಿ ಬಸ್ಸ್‍ಪಾಸು, ಅಂಧರ ಉಚಿತ ಬಸ್ಸ್ ಪಾಸ್ ಸ್ವಾತಂತ್ರ್ಯ ಹೋರಾಟಗಾರರ ಉಚಿತ, ಬಸ್ಸ್ ಪಾಸ್ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್ ಮತ್ತು ಅಪಘಾತ ಪರಿಹಾರ ನಿಧಿಗಳನ್ನು ಪಡೆಯಲುಸೇವಾಸಿಂಧು ಪೋರ್ಟಲ್‍ನಲ್ಲಿ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅಪ್‍ಲೋಡ್ ಮಾಡಿದ ಅರ್ಜಿ ಪ್ರತಿ ಹಾಗೂ ಪಾಸಿನ ಶುಲ್ಕವನ್ನು ವಿದ್ಯಾರ್ಥಿಗಳು ಶಾಲಾಕಾಲೇಜು ಮುಖಾಂತರ ಕರಾರಸಾ ನಿಗಮದ ಬಸ್ಸು ನಿಲ್ದಾಣದ ಪಾಸ್ ಕೌಂಟರ್ ನಲ್ಲಿ ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಸೂಕ್ತ ದಾಖಲೆಗಳನ್ನು ಹಾಗೂ ಪಾಸ್ ಶುಲ್ಕವನ್ನು ನಿಗಮದ ಪಾಸ್ ಕೌಂಟರ್ ನಲ್ಲಿ ನೀಡಿ ಬಸ್ ಪಾಸುಗಳನ್ನು ಪಡೆಯಬಹುದಾಗಿದೆ ಎಂದು ಮಂಗಳೂರು ಕರಾರಸಾಂ ವಿಭಾಗದ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.